ನಕಲಿ ಅಂಕಪಟ್ಟಿ ನೀಡಿ ಪ್ರಾಂಶುಪಾಲ ಹುದ್ದೆ: FIR ದಾಖಲು

ಧಾರವಾಡ: ನಕಲಿ ಅಂಕಪಟ್ಟಿ ನೀಡಿ ಪ್ರಾಚಾರ್ಯ ಹುದ್ದೆಗೇರಿದ್ದ ಪ್ರಾಂಶುಪಾಲನ ಮೇಲೆ ದೂರು ದಾಖಲಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡದ ಮುತ್ತಣ್ಣ ಸ್ಮಾರಕ ಪೊಲೀಸ್ ವಸತಿ ಶಾಲೆಯ ಡಾ.ಯಲ್ಲಪ್ಪಗೌಡ ಪಿ.ಕಲ್ಲನಗೌಡರ ಎಂಬವರು ನಕಲಿ ಬಿ.ಎಡ್ (B.Ed) ಅಂಕಪಟ್ಟಿ ನೀಡಿ ಪ್ರಾಂಶುಪಾಲ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
ವಾರ್ಡನ್ ಹುದ್ದೆಯಲ್ಲಿದ್ದ ಡಾ.ಯಲ್ಲಪ್ಪಗೌಡ ಕಲ್ಲನಗೌಡರ ಉತ್ತರ ಪ್ರದೇಶದಲ್ಲಿ ನಕಲಿ ಬಿ.ಎಡ್ ಅಂಕಪಟ್ಟಿಯನ್ನು ಮಾಡಿಸಿದ್ದರು.
2001ರಲ್ಲೇ ಉತ್ತರ ಪ್ರದೇಶದ ಡಿಪಾರ್ಟ್ಮೆಂಟ್ ಆಫ್ ಓಪನ್ ಡಿಸ್ಟನ್ಸ್ ಎಜ್ಯುಕೇಶನ್ ಕೇಂದ್ರದ ಅಂಕಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು.