ಈಜಲು ಹೋದ ಮೂವರು ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ ಸಾವು
ಚಿಕ್ಕಬಳ್ಳಾಪುರ: ಈಜಲು ಹೋದ ಮೂವರು ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರದ ಶ್ರೀನಿವಾಸ ಸಾಗರ ಜಲಾಶಯದಲ್ಲಿ ಈ ಘಟನೆ ನಡೆದಿದ್ದು, ಇಮ್ರಾನ್ ಖಾನ್(20), ರಾಧಿಕಾ(19) ಹಾಗೂ ಪೂಜಾ ಈಜಲು ಹೋಗಿ ಮುಳುಗಿ ಸಾವನ್ನಪ್ಪಿದ್ದಾರೆ.
ವೀಕೆಂಡ್ ಎಂದು ಕರ್ನಾಟಕ ಫಾರ್ಮಸಿ ಕಾಲೇಜಿನ ಸುನೀತಾ, ರಾಧಿಕ, ಪೂಜಾ, ಇಮ್ರಾನ್ ಖಾನ್, ವಿಕಾಸ್, ಚನ್ನರಾಮ್ ಎಂಬ ಆರು ವಿದ್ಯಾರ್ಥಿಗಳು ಮೂರು ಬೈಕುಗಳಲ್ಲಿ ಶನಿವಾರ ಬೆಂಗಳೂರಿನಿಂದ ಚಿಕ್ಕಬಳ್ಳಾಪುರದ ಶ್ರೀನಿವಾಸ ಸಾಗರ ಜಲಾಶಯಕ್ಕೆ ಪಿಕ್‌ನಿಕ್ ಬಂದಿದ್ದರು.
ಈ ವೇಳೆ ಸುನಿತಾಳನ್ನು ಹೊರತುಪಡಿಸಿ ಉಳಿದ 5 ಮಂದಿ ವಿದ್ಯಾರ್ಥಿಗಳು ಜಲಾಶಯ ಹಿಂಭಾಗದ ಹಿನ್ನೀರಿನಲ್ಲಿ ಈಜಾಡಲು ಹೋಗಿದ್ದು, ರಾಧಿಕಾ, ಪೂಜಾ ಮತ್ತು ಇಮ್ರಾನ್ ಖಾನ್ ಜಲಾಶಯದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ