May 10, 2026

ಪಂಜಾಬ್ ಮುಖ್ಯಮಂತ್ರಿಯ ಪುತ್ರಿಗೆ ಕೊಲೆ ಬೆದರಿಕೆ

0
image_editor_output_image740436675-1680253164346.jpg

ಪಂಜಾಬ್‌: ಅಮೇರಿಕಾದಲ್ಲಿ ನೆಲೆಸಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಅವರ ಪುತ್ರಿ ಸೀರತ್ ಕೌರ್ ಅವರಿಗೆ ಮೂರು ಬಾರಿ ಕರೆ ಮಾಡಿರುವ ಕೆಲವರು ಅಶ್ಲೀಲವಾಗಿ ನಿಂದಿಸಿ, ಕೊಲೆ ಮಾಡುವ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಸಿಖ್ ಮೂಲಭೂತವಾದಿ ಪ್ರಚಾರಕ ಅಮೃತ್ ಪಾಲ್ ಸಿಂಗ್ ಹಾಗೂ ಅವರ ಸಹಚರರ ಬಂಧನಕ್ಕಾಗಿ ಪಂಜಾಬ್ ನಲ್ಲಿ ಪೊಲೀಸರು ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸಿದ್ದು, ಈ ಮಧ್ಯೆ ಖಲಿಸ್ತಾನಿ ಆರ್ಮಿ ಹೆಸರಿನಲ್ಲಿ ಅಮೃತ್ ಪಾಲ್ ಸಿಂಗ್ ಬೆಂಬಲಿಗರು ಬೆದರಿಕೆ ಕರೆ ಮಾಡಿದ್ದಾರೆ.

ಸೀರತ್ ಕೌರ್ ಅವರ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ದೆಹಲಿ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ ಅಮೆರಿಕದ ಭಾರತೀಯ ರಾಯಭಾರಿ ಕಚೇರಿಗೆ ಪತ್ರ ಬರೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!