May 10, 2026

ಸೊಳ್ಳೆ ಕಾಯಿಲ್ ನಿಂದ ವಿಷಪೂರಿತ ಹೊಗೆ: ಉಸಿರುಗಟ್ಟಿ ಒಂದೇ ಕುಟುಂಬದ 6 ಮಂದಿ ಸಾವು

0
image_editor_output_image-1903247095-1680253646364.jpg

ನವದೆಹಲಿ: ಸೊಳ್ಳೆ ಕಾಯಿಲ್ ನಿಂದ ಉಸಿರುಗಟ್ಟಿ ಒಂದೇ ಕುಟುಂಬದ ಆರು ಮಂದಿ ಕೊನೆಯುಸಿರೆಳೆದಿರುವ ದಾರುಣ ಘಟನೆ ದೆಹಲಿಯ ಶಾಸ್ತ್ರೀ ಪಾರ್ಕ್ ಪ್ರದೇಶದಲ್ಲಿ ಶುಕ್ರವಾರ ನಡೆದಿರುವುದಾಗಿ ವರದಿ ತಿಳಿಸಿದೆ.

ಮೇಲ್ನೋಟಕ್ಕೆ ಮಕ್ಕಳು ಸೇರಿದಂತೆ ಆರು ಮಂದಿ ಉಸಿರುಗಟ್ಟಿ ಇಹಲೋಕ ತ್ಯಜಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಪ್ರಾಥಮಿಕ ತನಿಖೆಯಲ್ಲಿ ರಾತ್ರಿ ವೇಳೆ ಸೊಳ್ಳೆ ಕಾಯಿಲ್ ಹಚ್ಚಿಟ್ಟಿದ್ದು ಅದರ ಬೂದಿ ಕೋಣೆಯಲ್ಲಿ ಪತ್ತೆಯಾಗಿದೆ.

ವಿಷಕಾರಿ ಹೊಗೆಯಿಂದ ಇವರೆಲ್ಲಾ ಪ್ರಜ್ಞಾಹೀನರಾಗಿದ್ದು, ನಂತರ ಉಸಿರುಗಟ್ಟಿ ಕೊನೆಯುಸಿರೆಳೆದಿರುವುದಾಗಿ ತಿಳಿದುಬಂದಿದೆ.

ಘಟನೆ ನಡೆಯುವ ಸಂದರ್ಭದಲ್ಲಿ ಮನೆಯಲ್ಲಿ ಒಟ್ಟು ಎಂಟು ಮಂದಿ ಇದ್ದಿದ್ದು, ಇದರಲ್ಲಿ ಮಕ್ಕಳು ಸೇರಿದಂತೆ ಆರು ಜನರು ವಿಧಿವಶರಾಗಿದ್ದಾರೆ. ಉಳಿದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ಹೇಳಿದೆ.

Leave a Reply

Your email address will not be published. Required fields are marked *

error: Content is protected !!