March 11, 2026

ರಾಮನವಮಿ  ಮೆರವಣಿಗೆ ವೇಳೆ ಕನ್ನಡ ಧ್ವಜ ಹಾರಿಸಿದ ಯುವಕನ ಮೇಲೆ ಮರಾಠಿಗರಿಂದ ಹಲ್ಲೆ

0
image_editor_output_image1549285603-1680252770292.jpg

ಬೆಳಗಾವಿ: ರಾಮನವಮಿ ಮೆರವಣಿಗೆ ವೇಳೆ ಕನ್ನಡ ಧ್ವಜ ಹಾರಿಸಿದ ಯುವಕನ ಮೇಲೆ ಮರಾಠಿ ಭಾಷಿಕ ಪುಂಡರಿಂದ ಹಲ್ಲೆ ನಡೆದಿರುವ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ.

ನಗರದ ತಿಲಕ್ ಚೌಕ್ ಬಳಿ ಗುರುವಾರ ರಾತ್ರಿ ರಾಮನವಮಿ ಮೆರವಣಿಗೆ ವೇಳೆ ನೂರಾರು ಯುವಕರು ಭಗವಾಧ್ವಜ ಹಿಡಿದು ಭಾಗಿಯಾಗಿದ್ದರು.

ಈ ವೇಳೆ ಕನ್ನಡ ಬಾವುಟ ಹಿಡಿದು ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಮಂಜುನಾಥ ಢಂಗ ಜೊತೆಗೆ ಮರಾಠಿ ಭಾಷಿಕ ಪುಂಡರು ವಾಗ್ವಾದ ನಡೆಸಿದ್ದಾರೆ.

ಏಕಾಏಕಿ ಗಲಾಟೆ ಶುರುಮಾಡಿ ಮಂಜುನಾಥ ಢಂಗ ಅವರ ಮೇಲೆ ಹಲ್ಲೆ ನಡೆಸಿ, ಕನ್ನಡ ಬಾವುಟಕ್ಕೆ ಅಪಮಾನ ಮಾಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!