ಮಂಗಳೂರು: ರಸ್ತೆ ಬದಿಯಲ್ಲಿದ್ದ ಮಹಿಳೆ ಮೇಲೆ ಹರಿದ ಬಸ್: ಮಹಿಳೆ ಸ್ಥಳದಲ್ಲೇ ಸಾವು
ಮಂಗಳೂರು :ನಡೆದುಕೊಂಡು ಹೋಗುತ್ತಿದ್ದ ಸುಮಾರು 50 ವರ್ಷ ಪ್ರಾಯದ ಮಹಿಳೆ ಮೇಲೆ ಬಸ್ ಹರಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆ ನಗರದ ಬೆಂದೂರು ಬಳಿ ನಡೆದಿದ್ದು, ಬಳಿಕ ಬಸ್ ನೊಂದಿಗೆ ಚಾಲಕ ಪರಾರಿಯಾಗಿದ್ದು ಬಸ್ ಪತ್ತೆ ಹಚ್ಚಲು ಪೊಲೀಸರು ಸಿಸಿ ಟಿವಿ ಪರಿಶೀಲನೆ ನಡೆಸುತ್ತಿದ್ದಾರೆ.
ಮೃತ ಪಟ್ಟ ಮಹಿಳೆ ಗುರುತು ಪತ್ತೆಯಾಗಿಲ್ಲ. ತರಕಾರಿ ತಗೊಂಡು ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಬಸ್ ಬಡಿದಿದ್ದು ಮಹಿಳೆ ಸ್ಥಳದಲ್ಲೇ ಒದ್ದಾಡಿ ಪ್ರಾಣ ಬಿಟ್ಟಿದ್ದು ಘಟನೆ ಬಳಿಕ ಚಾಲಕ ಬಸ್ ನೊಂದಿಗೆ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಸಂಚಾರಿ ಎಸಿಪಿ ಮತ್ತಿತರ ಅಧಿಕಾರಿಗಳು ಭೇಟಿ ನೀಡಿದ್ದು, ಈ ಸಂದರ್ಭ ಸಾರ್ವಜನಿಕರು ಪೋಲಿಸರನ್ನ ತರಾಟೆಗೆ ತಗೊಂಡಿದ್ದಾರೆ.




