March 11, 2026

ಉಡುಪಿ: ಖಾಸಗಿ ಹೊಟೇಲ್‌ ಗೆ ದಾಳಿ ನಡೆಸಿದ ಪೊಲೀಸರು: 21 ಮಂದಿಯ ಬಂಧನ, ನಗದು ಸೇರಿ ಹಲವು ಸೊತ್ತು ವಶಕ್ಕೆ

0
image_editor_output_image504230748-1680132321121.jpg

ಉಡುಪಿ: ಜಿಲ್ಲೆಯ ಖಾಸಗಿ ಹೊಟೇಲ್‌ನಲ್ಲಿ ಜೂಜಾಟವಾಡುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು 21 ಮಂದಿಯನ್ನು ಬಂಧಿಸಿ ನಗದು ಸೇರಿ ಹಲವು ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಹೆರ್ಗಾ ಗ್ರಾಮದ ಪರ್ಕಳ ಸಂಧ್ಯಾ ಹೋಟೆಲ್‌ನಲ್ಲಿ ಜೂಜಾಟವಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ದೊರಕಿತ್ತು. ಈ ಹಿನ್ನೆಲೆ ಮಣಿಪಾಲ ಪೊಲೀಸ್‌ ಠಾಣೆಯ ಸಿಬ್ಬಂದಿ ದಾಳಿ ನಡೆಸಿದಾಗ 1,37,800/ ನಗದು, 7 ವಾಹನ, ಮೊಬೈಲ್‌ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಒಟ್ಟು 21 ಮಂದಿಯನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!