June 26, 2026

ಮಂಗಳೂರು: ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

0
image_editor_output_image-1726162905-1679907361941.jpg

ಮಂಗಳೂರು: ನ್ಯಾಯಾಲಯದಿಂದ ವಾರೆಂಟ್ ಜಾರಿಯಾಗಿದ್ದರೂ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರನ್ನು ಬಂಧಿಸಿದ್ದು, ಆತನಿಗೆ ನ್ಯಾಯಾಲಯ 6 ತಿಂಗಳು ಜೈಲು ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿದೆ.

ಕಡಬ ಗ್ರಾಮದ ಲಿಗೋರಿ ಡಿಸೋಜ ಪುತ್ರ ವಿಲ್ಫ್ರೇಡ್ ಡಿಸೋಜ (34) ಬಂಧಿತ ಆರೋಪಿ.

ಈತ ಪ್ರಸ್ತುತ ಮಂಗಳೂರು ಕುಲಶೇಖರ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಸಿರ್ಲಾ ಪಡ್ಪು ಹೆವೆನ್ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದು, ಈತನ ವಿರುದ್ಧ ವಾರಂಟ್ ಹೊರಡಿಸಿದ ನಂತರ ಆತ ತಲೆಮರೆಸಿಕೊಂಡಿದ್ದ.

ಇನ್ನು ಆರೋಪಿಯನ್ನು ಮಾರ್ಚ್ 15ರಂದು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ಆರು ತಿಂಗಳ ಕಾರಾಗೃಹ ವಾಸ ಹಾಗೂ 10,000 ರೂಪಾಯಿ ಜುಲ್ಮಾನೆ ವಿಧಿಸಿದೆ.

Leave a Reply

Your email address will not be published. Required fields are marked *

error: Content is protected !!