ಬಿ.ಸಿರೋಡ್: 4 ಲಕ್ಷದ 33,333 ರೂಪಾಯಿಗಳಿಗೆ ಏಲಂ ಆದ ಹಲಸಿನ ಹಣ್ಣು
ಬಿ.ಸಿರೋಡ್: ಒಂದು ಹಲಸಿನ ಹಣ್ಣು ಏಲಂ ಗೆ ಅಂದರೆ ಒಂದು ನಾಲ್ಕು ಐದು ಸಾವಿರ ರೂಪಾಯಿಗೆ ಹೋಗಬಹುದು ಆದರೆ ಇಲ್ಲೊಂದು ಹಲಸಿನ ಹಣ್ಣು ಬರೋಬ್ಬರಿ 4 ಲಕ್ಷದ 33333 ರೂಪಾಯಿಗಳಿಗೆ ಏಲಂ ಪ್ರಕ್ರಿಯೆ ನಡೆದು ಅಚ್ಚರಿ ಮೂಡಿಸಿದೆ.
ಮೂಲರಪಟ್ನ ಎಂಬಲ್ಲಿ ನವೀಕೃತ ಮಸೀದಿ ಉದ್ಘಾಟನಾ ಅಂಗವಾಗಿ ನಡೆದ ಧಾರ್ಮಿಕ ಮತ ಪ್ರವಚನದಲ್ಲಿ ಖ್ಯಾತ ಭಾಷಣಗಾರ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ತನ್ನ ಪ್ರಭಾಷಣದ ಕೊನೆಯಲ್ಲಿ ಸಂಘಟಕರು ತರಿಸಿದ್ದ ಹಲಸಿನ ಹಣ್ಣನ್ನು ಏಲಂ ಪ್ರಕ್ರಿಯೆಗೆ ಉಸ್ತಾದರ ಬಳಿ ನೀಡಿದ್ದು ಅಝೀಜ್ ಮತ್ತು ಲತೀಫ್ ಎಂಬವರ ಮದ್ಯೆ ಏಲಂ ನಲ್ಲಿ ತೀವೃ ಪೈಪೋಟಿ ನಡೆದು ಕೊನೆಗೆ ನಾಲ್ಕು ಲಕ್ಷದ ಮೂವತ್ತ ಮೂರು ಸಾವಿರದ ಮುನ್ನೂರ ಮೂರು ರೂಪಾಯಿಗಳಿಗೆ ಲತೀಫ್ ಎಂಬವರ ಪಾಲಾಯಿತು.
ಇದೀಗ ಬರೋಬ್ಬರಿ ನಾಲ್ಕುವರೆ ಲಕ್ಷಕ್ಕೆ ಏಲಂ ಆದ ಹಲಸಿನಹಣ್ಣು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಸದ್ದು ಮಾಡುತ್ತಿದ್ದು ಉಸ್ತಾದ್ ಏಲಂ ಕರೆಯುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಾರೀ ವೈರಲ್ ಆಗುತ್ತಿದೆ.




