ಚಿಕ್ಕಮಗಳೂರು: ಚುನಾವಣಾ ಅಧಿಕಾರಿಗಳು 150 ಕ್ವಿಂಟಾಲ್ ಅಕ್ಕಿ ವಶಪಡಿಸಿಕೊಂಡಿರುವ ಘಟನೆ ತರೀಕೆರೆ ತಾಲ್ಲೂಕಿನ ಎಂ.ಸಿ.ಕ್ಯಾಂಪ್ ನಲ್ಲಿ ನಡೆದಿದೆ.
ಮತದಾರರಿಗೆ ಹಂಚಲು ತಂದಿದ್ದ 150 ಕ್ವಿಂಟಾಲ್ ಅಕ್ಕಿ ಮೂಟೆಗಳನ್ನು ಟೆಂಪೋ ಸಮೇತ ತರೀಕೆರೆ ಚುನಾವಣಾ ಅಧಿಕಾರಿಗಳಿಂದ ವಶಪಡಿಸಲಾಗಿದೆ.
ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

