ಪತ್ನಿಯಿಂದಲೇ ಡಿಆರ್ ಪೊಲೀಸ್ ಪೇದೆಯ ಹತ್ಯೆ
ಬಳ್ಳಾರಿ: ಇಬ್ಬರು ಪತ್ನಿಯರನ್ನು ಮ್ಯಾನೇಜ್ ಮಾಡಲು ಹೋಗಿ ಪೇದೆಯೊಬ್ಬ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಚಿನ್ನಾಪುರ ಗ್ರಾಮದಲ್ಲಿ ನಡೆದಿದೆ.
ಡಿಆರ್ ಪೊಲೀಸ್ ಪೇದೆಯಾಗಿ ಕೆಲಸ ಮಾಡುತ್ತಿದ್ದ ಜಾಫರ್ ಹತ್ಯೆಯಾದಾತ. ಬುಧವಾರ ರಾತ್ರಿ 10 ಗಂಟೆ ಹೊತ್ತಲ್ಲಿ ಡಿಎಆರ್ ಪೊಲೀಸ್ ಗ್ರೌಂಡ್ ಪಕ್ಕ ಇರುವ ಕ್ವಾಟ್ರಸ್‌ನ ತನ್ನ ಮನೆಯಲ್ಲೇ ಜಾಫರ್ ಬರ್ಬರವಾಗಿ ಹತ್ಯೆಯಾಗಿದ್ದಾನೆ.
ಆತನ ಪತ್ನಿ ಹನುಮಕ್ಕ ಯಾರೊ ಬಂದು ಪತಿಯನ್ನು ಕೊಲೆ ಮಾಡಿದ್ದಾರೆ ಎಂದು ಅಕ್ಕಪಕ್ಕದವರನ್ನು ಕರೆಸಿ ಅಳುತ್ತಾ ಚೀರಾಡಿದ್ದಾಳೆ.
ತಕ್ಷಣ ಅಕ್ಕಪಕ್ಕದ ಪೊಲೀಸ್ ಸಿಬ್ಬಂದಿ ಜಾಫರ್‌ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಷ್ಟೊತ್ತಿಗಾಗಲೇ ಜಾಫರ್ ಉಸಿರು ನಿಂತು ಹೋಗಿತ್ತು.
ಆದರೆ ಈಗ ಜಾಫರ್‌ನ ಸಂಬಂಧಿಕರು ಆತನ ಪತ್ನಿ ಹನುಮಕ್ಕಳೇ ಕೊಲೆ ಮಾಡಿಸಿದ್ದಾಳೆ ಎಂದು ದೂರು ನೀಡಿದ್ದಾರೆ.
ಅಲ್ಲದೇ ಪೊಲೀಸ್ ಕ್ವಾಟ್ರಸ್‌ನಲ್ಲಿ ಹೊರಗಿನವರು ಬಂದು ಹೊಡೆಯಲು ಸಾಧ್ಯವಿಲ್ಲ. ಇದೊಂದು ಪ್ರೀ ಪ್ಲಾನ್ ಮರ್ಡರ್. ಪ್ರೈಮರಿ ಸಸ್ಪೀಷಿಯಸ್ ಎಂದರೆ ಜಾಫರ್ ಪತ್ನಿ ಹನುಮಕ್ಕ ಎಂದು ಅನುಮಾನಿಸಿ ಪೊಲೀಸರು ಹನುಮಕ್ಕಳನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದ್ದಾರೆ.




