February 4, 2026

ಉಪ್ಪಿನಂಗಡಿ; ಮಗಳ ವಿವಾಹಕ್ಕೆ ಚಿನ್ನಾಭರಣ ಖರೀದಿಸಲೆಂದು ತೆರಳುತ್ತಿದ್ದಾಗ ಹಣ ದೋಚಿದ ಪ್ರಕರಣ: ಇಳಂತಿಲ ಗ್ರಾಮದ ಆರೋಪಿಯ ಬಂಧನ

0
image_editor_output_image-935767295-1679617650151.jpg

ಉಪ್ಪಿನಂಗಡಿ; ಮಗಳ ವಿವಾಹಕ್ಕೆ ಚಿನ್ನಾಭರಣ ಖರೀದಿಸಲೆಂದು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಕಾಯರ್ಪಾಡಿ ನಿವಾಸಿ ಮೊಹಮ್ಮದ್ ಅವರಿಂದ 10 ಲಕ್ಷ ರೂ.ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇಳಂತಿಲ ಗ್ರಾಮದ ಕಡವಿನಬಾಗಿಲು ನಿವಾಸಿ ಮುಸ್ತಫಾ (41)ಎಂಬಾತನನ್ನು ಬಂಧಿಸಿದ್ದಾರೆ.ಆತನಿಂದ ಎರಡು 9 ಲಕ್ಷ ರೂ.ಹಣವನ್ನು ವಶಪಡಿಸಿಕೊಂಡಿದ್ದಾರೆ.

ಈ ಪ್ರಕರಣದ ಇನ್ನೋರ್ವ ಆರೋಪಿ ಒಂದು ಲಕ್ಷ ರೂಪಾಯಿಯೊಂದಿಗೆ ಪರಾರಿಯಾಗಿದ್ದು ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಸೋಮವಾರ ಇಳಂತಿಲ ಗ್ರಾಮದ ಪೆದಮಲೆಯ ಸರಳೀಕಟ್ಟೆ ರಿಫಾಯಿನಗರ ರಸ್ತೆಯಲ್ಲಿ ಈ ಪ್ರಕರಣ ಸಂಭವಿಸಿದೆ.

ಕಾಯರ್ಪಾಡಿ ನಿವಾಸಿ ಮಹಮ್ಮದ್ ಪತ್ನಿ ಜೊತೆ ಮಗಳ ಮದುವೆಗೆ ಚಿನ್ನ ಖರೀದಿಸಲು ಹತ್ತು ಲಕ್ಷ ರೂ.ಹಣವನ್ನು ತೆಗೆದುಕೊಂಡು ಉಪ್ಪಿನಂಗಡಿಯ ಜ್ಯುವೆಲ್ಲರಿಗೆ ಹೋಗುವಾಗ ಹಣ ದೋಚಿ ಪರಾರಿಯಾದ ಪ್ರಕರಣ ನಡೆದಿತ್ತು.

Leave a Reply

Your email address will not be published. Required fields are marked *

You may have missed

error: Content is protected !!