March 22, 2026

ಪಾಲಿಕೆ ಟ್ಯಾಕ್ಸ್ ಕಲೆಕ್ಟರ್ ನಿಂದ ಸ್ನೇಹಿತನ ಕೊಲೆಗೆ ಯತ್ನ

0
image_editor_output_image547334161-1679526436534.jpg

ಬೆಂಗಳೂರು: ಇಬ್ಬರ ನಡುವೆ ಉಂಟಾದ ಬಿರುಕು ಪಾಲಿಕೆ ಟ್ಯಾಕ್ಸ್ ಕಲೆಕ್ಟರ್ ಸ್ನೇಹಿತ ರೌಡಿಶೀಟರ್ ಕೊಲೆ ಮಾಡಲು ಯತ್ನಿದ್ದಾನೆ.

ಪಾಲಿಕೆ ಟ್ಯಾಕ್ಸ್ ಕಲೆಕ್ಟರ್ ಒಂದು ಕಾಲದ ತನ್ನ ಸ್ನೇಹಿತ ಗಗನ್ ಕುಮಾರ್ ಗೆ ಸ್ಕೆಚ್ ಹಾಕಿ ಕೊಲೆ ಮಾಡಲು ಯತ್ನಿಸಿದ್ದಾನೆ.

ಮಾರ್ಚ್ 21ರ ಮುಂಜಾನೆ 5.30 ರಿಂದ 6 ಗಂಟೆ ಸುಮಾರಿಗೆ ಜಯಮಾಹಲ್ ರಸ್ತೆ ಯ ಸಚಿವರ ಮನೆ ಮುಂಭಾಗ ಸ್ನೇಹಿತ ರೌಡಿಶೀಟರ್ ಗಗನ್ ಕುಮಾರ್‍ಗೆ ಪಾಲಿಕೆ ಟ್ಯಾಕ್ಸ್ ಕಲೆಕ್ಟರ್ ಹಾಗೂ ಗ್ಯಾಂಗ್ ದೊಣ್ಣೆ ಮಾರಕಾಸ್ತ್ರಗಳಿಂದ ಹಿಗ್ಗಾಮುಗ್ಗ ಥಳಿಸಿದ್ದಾರೆ.

ಗಗನ್ ಕುಮಾರ್ ಸಾಯಲಿಲ್ಲಿ ಅನ್ನೋ ಕಾರಣಕ್ಕೆ ರೌಡಿ ಶೀಟರ್ ಗಗನ್‍ನನ್ನ ಕೆಳಗೆ ಬೀಳಿಸಿ ಕೆಎ 03 ಎಂಫ್ 3347 ನಂಬರ್‍ನ ಕಾರು ಹತ್ತಿಸಿ ಕೊಲೆಗೆ ಯತ್ನಿಸಿದ್ದಾನೆ.

ಮೂರ್ನಾಲ್ಕು ಬಾರಿ ಕಾರು ಹತ್ತಿಸಿ ಬಳಿಕ ಎಸ್ಕೇಪ್ ಆಗಿದ್ದಾರೆ. ಪಾಲಿಕೆ ಟ್ಯಾಕ್ಸ್ ಕಲೆಕ್ಟರ್ ಸುನೀಲ್ ಕುಮಾರ್ ಅಂಡ್ ಗ್ಯಾಂಗ್‍ನಿಂದ ದಾಳಿಗೆ ಒಳಗಾಗಿದ್ದ ಗಗನ್, ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಜೆ.ಸಿ ನಗರ ಪೊಲೀಸರು ಹಲ್ಲೆಗೊಳಗಾಗಿದ್ದ ಗಗನ್‍ನನ್ನ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!