March 22, 2026

ವಿದ್ಯುತ್ ಸ್ಪರ್ಶಿಸಿ ಲೈನ್ ಮ್ಯಾನ್  ಸಾವು

0
image_editor_output_image-1532800317-1679526521980.jpg

ರಾಮನಗರ: ವಿದ್ಯುತ್ ಸ್ಪರ್ಶಿಸಿ ಬೆಸ್ಕಾಂ ಲೈನ್ ಮ್ಯಾನ್ ಸಾವನ್ನಪ್ಪಿರುವ ಘಟನೆ ಮಾಗಡಿ ತಾಲೂಕಿನ ಕಳ್ಳಿಪಾಳ್ಯ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಮುದ್ದೆ ಬಿಹಾಳ ಗ್ರಾಮದ ನಿವಾಸಿ ಬೆಸ್ಕಾಂ ಲೈನ್ ಮ್ಯಾನ್ ಶರಣ ಬಸಪ್ಪ (30) ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ. ಕಳ್ಳಿಪಾಳ್ಯ ಗ್ರಾಮದ ವಿದ್ಯುತ್ ಟಿಸಿಯಲ್ಲಿ ಫೀಜ್ ಅಳವಡಿಸುವ ವೇಳೆ ವಿದ್ಯುತ್ ಸ್ಪರ್ಶಿಸಿದೆ.

ಫೀಜ್ ಅಳವಡಿಸುವ ಮುನ್ನಾ ಎಲ್‍ಸಿ ತೆಗೆಯುವಂತೆ ಕುದೂರು ಬೆಸ್ಕಾಂ ಜೆಇ ನವೀನ್ ಕುಮಾರು ಗಮನಕ್ಕೆ ತಂದರೂ ಜೆಇ ನವೀನ್ ಕುಮಾರ್ ನಿರ್ಲಕ್ಷ್ಯದಿಂದಾಗಿ ಈ ದುರ್ಘಟನೆ ನಡೆದಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಮೃತಪಟ್ಟ ಒಂದು ಗಂಟೆ ಕಳೆದರೂ ಮೃತದೇಹವನ್ನು ಕೊಂಡೊಯ್ಯಲು ಅಂಬುಲೆನ್ಸ್ ಬಂದಿಲ್ಲ ಎಂದು ಕಿಡಿಕಾರಿದ್ದಾರೆ.

Leave a Reply

Your email address will not be published. Required fields are marked *

error: Content is protected !!