June 26, 2026

40 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಸಿಕ್ಕಿಬಿದ್ದ ಪಿಎಸ್‌ಐ, ಪಿಎಸ್‌ಐ ವಾಹನ ಚಾಲಕ

0
image_editor_output_image-146198806-1679471127755.jpg

ಹಾವೇರಿ: 40 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ರಾಣೇಬೆನ್ನೂರು ನಗರ ಪೊಲೀಸ್ ಠಾಣೆಯ ಪಿಎಸ್‌ಐ ಮತ್ತು ಪಿಎಸ್‌ಐ ವಾಹನ ಚಾಲಕ ಇಬ್ಬರೂ ಲೋಕಾಯುಕ್ತ ಬಲೆ ಬಿದ್ದಿದ್ದಾರೆ.

ರಾಣೆಬೆನ್ನೂರು ಶಹರ ಠಾಣೆಯ ಪಿಎಸ್‌ಐ ಸುನೀಲ ತೇಲಿ, ವಾಹನ ಚಾಲಕ ಸಚಿನ್ ಆರೋಪಿಗಳಾಗಿದ್ದಾರೆ.

ರಾಣೇಬೆನ್ನೂರು ನಗರ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರಿಗೆ ಮನೆ ಬಾಡಿಗೆ ವಸೂಲಿ ಮಾಡಿಕೊಡಲು 50 ಸಾವಿರ ರೂ. ಬೇಡಿಕೆಯಿಟ್ಟಿದ್ದರು.

ಫೀರೋಜಾ ಎಂಬ ವ್ಯಕ್ತಿ 40 ಸಾವಿರ ರೂ. ಹಣವನ್ನ ಟೀ ಸ್ಟಾಲ್‌ನಲ್ಲಿ ಕೊಟ್ಟು ಹೋಗಿದ್ದರು. ಈ ಹಣವನ್ನ ಚಾಲಕ ತೆಗೆದುಕೊಂಡು ಪಿಎಸ್‌ಐಗೆ ಕೊಡುತ್ತಿದ್ದ ವೇಳೆ ರೇಡ್ ಹ್ಯಾಂಡ್‌ಆಗಿ ಸಿಕ್ಕಿ ಬಿದ್ದಿದ್ದಾರೆ.

Leave a Reply

Your email address will not be published. Required fields are marked *

error: Content is protected !!