ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಶಾಸಕನ ಆಪ್ತನ ಮನೆ ಮೇಲೆ ಪೊಲೀಸರು ದಾಳಿ: 500ಕ್ಕೂ ಹೆಚ್ಚು ಕುಕ್ಕರ್‌ಗಳ ವಶಕ್ಕೆ
ಚಿಕ್ಕಮಗಳೂರು: ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಆಪ್ತನ ಮನೆ ಮೇಲೆ ಪೊಲೀಸರು ದಾಳಿ ನಡೆಸಿ ಮತದಾರರಿಗೆ ಹಂಚಲೆಂದು ತಂದಿರಿಸಿದ್ದ ಕುಕ್ಕರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಶಾಸಕ ಟಿ.ಡಿ. ರಾಜೇಗೌಡ ಆಪ್ತ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸತೀಶ್ ಅವರ ಜಯಪುರ ಬಳಿಯ ತೆಂಗಿನಮನೆ ಗ್ರಾಮದಲ್ಲಿರುವ ಮನೆಗೆ ಕೊಪ್ಪ ತಾಲೂಕಿನ ಜಯಪುರ ಠಾಣಾ ಪೊಲೀಸರು ಇಂದು ದಾಳಿ ನಡೆಸಿದ್ದಾರೆ.
ಈ ವೇಳೆ ಮತದಾರರಿಗೆ ವಿತರಿಸಲು ತಂದಿದ್ದ 500ಕ್ಕೂ ಹೆಚ್ಚು ಕುಕ್ಕರ್‌ಗಳು ಮನೆಯಲ್ಲಿ ಪತ್ತೆಯಾಗಿದ್ದು, ಎಲ್ಲವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.




