May 11, 2026

ಕೇರಳ: ಸಿನಿಮಾ ನಟಿಯ ಮನೆಯಲ್ಲಿ ಕೆಲಸಕ್ಕಿದ್ದ ವಲಸೆ ಕಾರ್ಮಿಕನಿಗೆ ಹೊಡೆಯಿತು 10 ಕೋಟಿ ರೂ. ಬಂಪರ್ ಲಾಟರಿ

0
WhatsApp-Image-2023-03-20-at-17.21.34.jpeg

ತಿರುವನಂತಪುರಂ: ಮಲಯಾಳಂ ಸಿನಿಮಾ ನಟಿಯ ಮನೆಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ವಲಸೆ ಕಾರ್ಮಿಕನೊಬ್ಬನಿಗೆ ಕೇರಳದ ಸಮ್ಮರ್ ಬಂಪರ್ ಲಾಟರಿ ಹೊಡೆದಿದೆ. ಅಸ್ಸಾಂ ಮೂಲದ ಆಲ್ಬರ್ಟ್ ಟಿಗಾ ಎಂಬ ಕಾರ್ಮಿಕ ಬರೋಬ್ಬರಿ 10 ಕೋಟಿ ರೂ. ಹಣ ಬಹುಮಾನವಾಗಿ ಗೆದ್ದಿದ್ದಾರೆ.‌

‘ಒರು ಮುತ್ತಸ್ಸಿ ಗಧಾ’ ಖ್ಯಾತಿಯ ನಟಿ ರಜಿನಿ ಚಾಂಡಿ ಅವರ ಮನೆಯಲ್ಲಿ ಟಿಗಾ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ತೆರಿಗೆ ಕಡಿತದ ನಂತರ ಟಿಗಾ ಅವರಿಗೆ 6.6 ಕೋಟಿ ರೂ. ದೊರೆಯಲಿದೆ.

ಇತ್ತೀಚೆಗೆ ಕೋಲ್ಕತ್ತಾ ಮೂಲದ ಮತ್ತೊಬ್ಬ ವಲಸೆ ಕಾರ್ಮಿಕ ಇಡುಕ್ಕಿ ಜಿಲ್ಲೆಯಲ್ಲಿ 75 ಲಕ್ಷ ರೂಪಾಯಿ ಮೌಲ್ಯದ ಲಾಟರಿ ಗೆದ್ದಿದ್ದರು. ಆನಂತರ ಯಾರೋ ಟಿಕೆಟ್ ಕಿತ್ತುಕೊಳ್ಳುತ್ತಾರೆ ಎಂದು ಹೆದರಿ ಪೊಲೀಸರ ಮೊರೆ ಹೋಗಿದ್ದು ದೊಡ್ಡ ಸುದ್ದಿಯಾಗಿತ್ತು.

ಈ ಬಾರಿಯ ಸಮ್ಮರ್ ಬಂಪರ್ ಲಾಟರಿಯಲ್ಲಿ ಎರಡನೇ ಬಹುಮಾನ ಮತ್ತು ಮೂರನೇ ಬಹುಮಾನ ಪಡೆದ ವಿಜೇತರು ಕ್ರಮವಾಗಿ 50 ಲಕ್ಷ ಮತ್ತು 5 ಲಕ್ಷ ರೂ. ಬಹುಮಾನ ಪಡೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!