May 14, 2026

ಕಾಸರಗೋಡು: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ: ಆರೋಪಿಗೆ 88 ವರ್ಷ ಕಠಿಣ ಸಜೆ, ಏಳು ಲಕ್ಷ ರೂ. ದಂಡ

0
IMG-20230204-WA00181.jpg

ಕಾಸರಗೋಡು: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗೆ ಕಾಸರಗೋಡು ನ್ಯಾಯಾಲಯ 88 ವರ್ಷ ಕಠಿಣ ಸಜೆ ಮತ್ತು ಏಳು ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ದೇಲಂಪಾಡಿ ಚೋಮತ್ತಡ್ಕ ದ ಮುಹಮ್ಮದ್(60)ಗೆ ಕಾಸರಗೋಡು ಜಿಲ್ಲಾ ಅಡಿಷನಲ್ ಸೆಷನ್ಸ್ ನ್ಯಾಯಾಲಯ ವಿವಿಧ ಫೋಕ್ಸೋ ಕಾಯ್ದೆಯಂತೆ ಶಿಕ್ಷೆ ವಿಧಿಸಿದೆ. ದಂಡ ಪಾವತಿಸದಿದ್ದಲ್ಲಿ ಏಳು ವರ್ಷ ಅಧಿಕ ಶಿಕ್ಷೆ ಅನುಭವಿಸಬೇಕು.2019ರ ಆಗಸ್ಟ್ 14 ರಂದು ಸೇರಿದಂತೆ ಹಲವು ಬಾರಿ ಈತ ಒಂಭತ್ತು ವರ್ಷದ ಬಾಲಕಿಯನ್ನು ಮನೆ ಸಮೀಪದ ನಿರ್ಜನ ಸ್ಥಳಕ್ಕೆ ಕೊಂಡೊಯ್ದು ಕಿರುಕುಳ ನೀಡಿರುವುದಾಗಿ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣದಲ್ಲಿ 10 ಮಂದಿ ಸಾಕ್ಷಿ ಗಳ ನ್ನು ವಿಸ್ತರಿಸಲಾಗಿತ್ತು. 15 ರಷ್ಟು ಸಾಕ್ಷ್ಯಗಳನ್ನು ಹಾಜರು ಪಡಿಸಲಾಗಿತ್ತು. ಆದೂರು ಪೊಲೀಸರು ಆರೋಪಿಯನ್ನು ಬಂಧಿಸಿ, ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

Leave a Reply

Your email address will not be published. Required fields are marked *

error: Content is protected !!