October 8, 2026

ಕಾಸರಗೋಡು: ಸಿಡಿಲು ಬಡಿದು ಯುವಕ ಮೃತ್ಯು

0
image_editor_output_image251944469-1791455032644

ಕಾಸರಗೋಡು:ಅದೂರು ಪೊಲೀಸ್ ಠಾಣೆ ವ್ಯಾಪ್ತಿಯ ದೇಲಂಪಾಡಿ ಬಳಿಯ ಪಾಂಡಿ ಬಳವಂತಡ್ಕದಲ್ಲಿ ಮಂಗಳವಾರ ಸಂಜೆ 7:30 ರ ಸುಮಾರಿಗೆ ಸಿಡಿಲು ಬಡಿದು 30 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಸಂಭವಿಸಿದೆ.

ಮೃತರನ್ನು ಕುಂಟಾರು ಉಯಿತ್ತಡ್ಕದ ಮಾಯಿಲಾಂಕೋಟ ನಿವಾಸಿ ಅರಬಿ ಮತ್ತು ನಫೀಸಾ ದಂಪತಿಯ ಪುತ್ರ ಮುಹಮ್ಮದ್ ನೌಫಲ್ (30) ಎಂದು ಗುರುತಿಸಲಾಗಿದೆ.

ನೌಫಲ್ ಪಾಂಡಿ ಬಳವಂತಡ್ಕದಲ್ಲಿರುವ ತನ್ನ ಪತ್ನಿಯ ಮನೆಗೆ ಹೋಗಿದ್ದ ವೇಳೆ ಈ ಘಟನೆ ಸಂಭವಿಸಿದೆ. ಅವರನ್ನು ತಕ್ಷಣ ಮುಳ್ಳಿಯೇರಿಯ ಸಹಕಾರಿ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ, ಆ ವೇಳೆಗೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

ನೌಫಲ್ ತಿರುವನಂತಪುರದ ಜ್ಯೂಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!