August 21, 2026

ಪಾಣೆಮಂಗಳೂರು ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿದ ಅಪರಿಚಿತ ಮಹಿಳೆ

0
image_editor_output_image738694307-1637386959976.jpg

ಬಂಟ್ವಾಳ: ಪಾಣೆಮಂಗಳೂರು ನೇತ್ರಾವತಿ ಸೇತುವೆ ಯಿಂದ ಮಹಿಳೆಯೋರ್ವಳು ನದಿಗೆ ಹಾರಿದ ಘಟನೆ ನಡೆದಿದೆ.

ಬೆಳಿಗ್ಗೆ ಸುಮಾರು 10 ಗಂಟೆಯ ವೇಳೆ ಗೆ ನೇತ್ರಾವತಿ ಸೇತುವೆಯಿಂದ ಮಹಿಳೆಯೊರ್ವಳು ಹಾರಿದ್ದನ್ನು ವಾಹನ ಸವಾರರು ನೋಡಿ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕೂಡಲೇ ಸ್ಥಳೀಯ ಮುಳಗುಗಾರರು ದೋಣಿಯ ಮೂಲಕ ನೇತ್ರಾವತಿ ಸೇತುವೆಯ ಬಳಿಗೆ ಬಂದರೂ ಅದಾಗಲೇ ಮಹಿಳೆ ನೀರಿನಲ್ಲಿ ಮುಳುಗಿ ಕೊಚ್ಚಿಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಸ್ಥಳೀಯರು ನೀಡಿದ್ದಾರೆ.
ನದಿಗೆ ಹಾರಿದ ಮಹಿಳೆ ಯಾರು ಎಂಬ ಮಾಹಿತಿ ಇನ್ನೂ ಕೂಡ ಲಭ್ಯವಾಗಿಲ್ಲ.

ಘಟನೆ ನಡೆದ ಬಳಿಕ ಕೆಲ ಹೊತ್ತು ಹೆದ್ದಾರಿ ಯಲ್ಲಿ ಸಂಚಾರಕ್ಕೆ ಅಡಚಣೆಯಾಗಿತ್ತು.
ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಅವರು ಟ್ರಾಫಿಕ್ ಸುಲಭ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

Leave a Reply

Your email address will not be published. Required fields are marked *

You may have missed

error: Content is protected !!