February 2, 2026

ಕಾಳಿ ದೇವಾಲಯ ನಿರ್ಮಾಣಕ್ಕೆ ತನ್ನ ಸ್ವಂತ ಭೂಮಿಯನ್ನು ದಾನ ಮಾಡಿದ ಮುಸ್ಲಿಂ ರೈತ

0
image_editor_output_image-233136180-1637385894427.jpg

ಪಶ್ಚಿಮ ಬಂಗಾಳ: ಮುಸ್ಲಿಂ ರೈತ ಗ್ರಾಮದಲ್ಲಿ ಕಾಳಿ ದೇವಾಲಯ ನಿರ್ಮಾಣಕ್ಕೆ ತನ್ನ ಸ್ವಂತ ಭೂಮಿಯನ್ನು ದಾನ ಮಾಡಿರುವ ಹೃದಯಸ್ಪರ್ಶಿ ಘಟನೆ ನಡೆದಿದೆ.

ಪ.ಬಂಗಾಳದ ನಾಡಿಯಾ ಜಿಲ್ಲೆಯ ಭೀಮ್ ಪುರ್, 450 ಕುಟುಂಬಗಳು ವಾಸವಿರುವ ಗ್ರಾಮ. ಅವರಲ್ಲಿ 150 ಮುಸ್ಲಿಂ ಕುಟುಂಬಗಳೂ ಅನ್ಯೋನ್ಯತೆಯಿಂದ ಜೀವನ ನಡೆಸುತ್ತಿವೆ. ಇದೇ ಗ್ರಾಮದ ಹನನ್ ಮೊಂಡಲ್ ಎಂಬುವವರೇ ದೇವಾಲಯಕ್ಕೆ ಭೂಮಿ ದಾನ ಮಾಡಿದವರು.

ಇಂಡೊ- ಬಾಂಗ್ಲಾ ಗಡಿಯಲ್ಲೇ ಇರುವ ಈ ಗ್ರಾಮದಲ್ಲಿ ಇದುವರೆಗೂ ಬಿ ಎಸ್ ಎಫ್ ಗೆ ಸೇರಿದ ಜಾಗದಲ್ಲಿ ಕಾಳಿ ಮಾತೆಯ ಪೂಜೆ ನಡೆಸುತ್ತಿದ್ದರು. ಅಲ್ಲಿ ಪ್ರಾರ್ಥನೆ ನಡೆಸಲು ಪ್ರತೀ ಬಾರಿ ಭಾರತೀಯ ಸೇನೆಯ ಅನುಮತಿ ಪಡೆದುಕೊಳ್ಲಬೇಕಿತ್ತು. ಕೆಲ ಬಾರಿ ಭದ್ರತಾ ಕಾರಣಗಳಿಗೆ ಅನುಮತಿ ನಿರಾಕರಿಸಲಾಗುತ್ತಿತ್ತು.

Leave a Reply

Your email address will not be published. Required fields are marked *

error: Content is protected !!