August 21, 2026

ಜಾರ್ಖಂಡ್‌ನ ಧನ್‌ಬಾದ್‌ನ ರೈಲು ಹಳಿಯಲ್ಲಿ ಸ್ಫೋಟ

0
image_editor_output_image-525186096-1637385152664.jpg

ನವದೆಹಲಿ: ಜಾರ್ಖಂಡ್‌ನ ಧನ್‌ಬಾದ್‌ನಲ್ಲಿ ಶನಿವಾರ ಮುಂಜಾನೆ ರೈಲು ಹಳಿಯ ಒಂದು ಭಾಗದಲ್ಲಿ ಸ್ಫೋಟ ಸಂಭವಿಸಿದ್ದು, ಡೀಸೆಲ್ ಇಂಜಿನ್ ಹಳಿ ತಪ್ಪಿದೆ.

ಧನಬಾದ್‌ನ ಗರ್ವಾ ರಸ್ತೆ ಮತ್ತು ಬರ್ಕಾನಾ ನಡುವೆ ಬಾಂಬ್ ಸ್ಫೋಟ ಸಂಭವಿಸಿದೆ ಎಂದು ರೈಲ್ವೆ ಹೇಳಿದೆ.

‘ದುಷ್ಕರ್ಮಿಗಳು ನಡೆಸಿದ ಬಾಂಬ್ ಸ್ಫೋಟದಿಂದಾಗಿ ಧನ್‌ಬಾದ್ ವಿಭಾಗದ ಡೀಸೆಲ್ ಲೊಕೊ ಹಳಿ ತಪ್ಪಿದೆ‘ ಎಂದು ರೈಲ್ವೆ ಇಲಾಖೆ ಹೇಳಿದೆ.

ಇದು ನಕ್ಸಲ್ ಸಂಬಂಧಿತ ಘಟನೆ ಎಂದು ಮೂಲಗಳು ತಿಳಿಸಿವೆ. ಯಾವುದೇ ಸಾವು-ನೋವಿನ ವರದಿಯಾಗಿಲ್ಲ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಹಳಿ ಮರುಸ್ಥಾಪನೆಯ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!