March 12, 2026

ಮೊಬೈಲ್‌ ಮಾತನಾಡುತ್ತಿದ್ದ ವೇಳೆ ಕುಸಿದು ಬಿದ್ದು ವ್ಯಕ್ತಿ ಮೃತ್ಯು

0
image_editor_output_image-865150424-1678776214746.jpg

ಹಾಸನ: ಮೊಬೈಲ್‌ ಮಾತನಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ನಡೆದಿದೆ.

ಹೊಳೆನರಸೀಪುರದ ಕಾರ್ಯಾಲಯ ಬಡಾವಣೆಯ ನಿವಾಸಿ ವೀರೂಪಾಕ್ಷ (40) ಸಾವನ್ನಪ್ಪಿದ ವ್ಯಕ್ತಿ.

ಹಾಸನ ಜಿಲ್ಲೆ, ಹೊಳೆನರಸೀಪುರ ಪಟ್ಟಣದ ಅರಣ್ಯ ಕಚೇರಿ ಬಳಿ ಈ ಘಟನೆ ನಡೆದಿದ್ದು, ಘಟನೆಯ ಎಲ್ಲಾ ದೃಶ್ಯಗಳು ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವೀರೂಪಾಕ್ಷ ಅಂಗಡಿಯ ಮುಂಭಾಗದಲ್ಲಿ ಕುಳಿತು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ. ಈ ವೇಳೆ ಹಠಾತ್‌ ಹೃದಯಾಘಾತವಾಗಿದೆ. ನೋಡ ನೋಡುತ್ತಿದ್ದಂತೆ ವೀರೂಪಾಕ್ಷ ಕುಸಿದು ಬಿದ್ದಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!