February 3, 2026

ಬಂಟ್ವಾಳ: ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ

0
db-21032023-vaishnavi.jpg

ಬಂಟ್ವಾಳ: ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಬಂಟ್ವಾಳದ ಬಾಳ್ತಿಲದಲ್ಲಿ ಗುರುವಾರ ನಡೆದಿದೆ.

ಬಾಳ್ತಿಲ ನಿವಾಸಿ ಶಿಕ್ಷಕರಾದ ಚಂದ್ರಶೇಖರ ಮತ್ತು ಸೌಮ್ಯ ಅವರ ಪುತ್ರಿ ವೈಷ್ಣವಿ (17) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ದ್ವಿತೀಯ ಪಿಯುಸಿ ಪರೀಕ್ಷೆ ಇಂದಿನಿಂದ ಆರಂಭವಾಗಿದ್ದು, ಕಾಲೇಜಿಗೆ ತೆರಳಿದ್ದ ಆಕೆ ಏನೋ ಮರೆತು ಬಂದಿದ್ದೇನೆಂದು ಮತ್ತೆ ಮನೆ ಕಡೆ ಬಂದಿದ್ದಾಳೆ. ಹೀಗಾಗಿ ಆಕೆಯ ಬಗ್ಗೆ ವಿಚಾರಿಸಲು ಆಕೆಯ ತಾಯಿ ಸೌಮ್ಯಾ ಪಕ್ಕದ ಮನೆಯವರಿಗೆ ಕರೆ ಮಾಡಿದ್ದರು. ಆದರೆ ಆ ವೇಳೆಗೆ ಮನೆಯ ಬಾಗಿಲು ಹಾಕಲಾಗಿತ್ತು. ಹೀಗಾಗಿ ಪಕ್ಕದ ಮನೆಯವರು ಆಕೆಯ ಮನೆಗೆ ತೆರಳಿ ನೋಡಿದಾಗ ವೈಷ್ಣವಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದ ವಿದ್ಯಾರ್ಥಿನಿಯಾಗಿರುವ ಆಕೆ ಕಲಿಕೆಯಲ್ಲಿ ತರಗತಿಯಲ್ಲಿ ಪ್ರಥಮ ಸ್ಥಾನಿಯಾಗಿದ್ದಳು. ಆದರೆ ಕಳೆದ ಕೆಲವು ದಿನಗಳಿಂದ ಖಿನ್ನತೆಗೆ ಜಾರಿದ್ದಳು. ಇದಕ್ಕಾಗಿ ಚಿಕಿತ್ಸೆಯನ್ನೂ ಕೊಡಿಸಲಾಗಿತ್ತು ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!