ಉಡುಪಿ ಮಠದ ಬಗ್ಗೆ ಮಿಥುನ್ ರೈ ಹೇಳಿಕೆಗೆ ಪೇಜಾವರಶ್ರೀ ಪ್ರತಿಕ್ರಿಯಿಸಿದ್ದು ಹೀಗೆ…
ತುಮಕೂರು: ಉಡುಪಿಯಲ್ಲಿರುವ ಪ್ರಸಿದ್ಧ ಶ್ರೀಕೃಷ್ಣ ಮಠ ನಿರ್ಮಾಣಕ್ಕೆ ಮುಸ್ಲಿಂ ರಾಜರೊಬ್ಬರು ಜಾಗ ನೀಡಿದ್ದಾರೆ ಎಂಬ ಕಾಂಗ್ರೆಸ್ ಮುಖಂಡ ಮಿಥುನ್ ರೈ ಅವರ ಹೇಳಿಕೆಗೆ ಕೃಷ್ಣ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಪ್ರತಿಕ್ರಿಯಿಸಿದ್ದು, “ಯಾರಾದರೂ ಕೂಡಾ ಯಾವ ಹೇಳಿಕೆಯನ್ನ ಕೂಡ ಕೊಡಬಹುದು. ಆದ್ರೆ ಅಂತಹ ಹೇಳಿಕೆಯನ್ನ ಕೊಡಬೇಕು ಅಂದರೆ , ಅದಕ್ಕೆ ಸೂಕ್ತವಾದ ಆಧಾರವನ್ನ ಕೊಟ್ಟೆ ಆ ಮಾತಿಗೆ ಬೆಲೆ ಇರುತ್ತೆ. ಆಧಾರ ರಹಿತವಾಗಿ ಏನು ಬೇಕಾದ್ರೂ ಹೇಳಬಹುದು” ಎಂದು ಹೇಳಿದ್ದಾರೆ.
ತುಮಕೂರಿನಲ್ಲಿ ಮಧ್ಯಮದ ಮುಂದೆ ಮಾತನಾಡಿದ ಪೇಜಾವರ ಶ್ರೀ, “ಹೇಳಿಕೆ ಕೊಟ್ಟವರನ್ನ ಯಾಕೆ ಕೊಟ್ಟಿದ್ದೀರಿ ಎಂದು ಕೇಳ್ಬೇಕು, ಯಾಕೆಂದರೆ ಆಧಾರ ರಹಿತವಾದ ಮಾತನ್ನ ಇಟ್ಕೊಂಡುಚರ್ಚೆ ಬೆಳೆಸ್ತಾರೆ ಎಂದರೆ ಅದಕ್ಕೆ ಅರ್ಥವಿಲ್ಲ” ಎಂದು ಹೇಳಿದ್ದಾರೆ.




