March 21, 2026

ವಿಟ್ಲ: ಕರಾವಳಿಯಲ್ಲಿ ಉಷ್ಣಾಂಶ ತೀವ್ರ ಹೆಚ್ಚಳ: ಗುಡ್ಡೆಯೊಂದರಲ್ಲಿ ಆಕಸ್ಮಿಕ ಬೆಂಕಿ

0
IMG-20230304-WA0013.jpg

ವಿಟ್ಲ: ಕರಾವಳಿಯಲ್ಲಿ ಉಷ್ಣಾಂಶ ತೀವ್ರ ಹೆಚ್ಚಳವಾಗಿದ್ದು, ಬಿಸಿಲಿನ ಬೇಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗಾಗಿ ಕೆಲ ದಿನಗಳಿಂದ ಗುಡ್ಡ-ಅರಣ್ಯ ಪ್ರದೇಶಗಳಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಳ್ಳುತ್ತಿದ್ದು, ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಸ್ಕೂಲ್ ಬಳಿಯ ಗುಡ್ಡೆಯೊಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಮಧ್ಯಾಹ್ನದ ಸುಡು ಬಿಸಿಲಿಗೆ ಗುಡ್ಡೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಸ್ಥಳಕ್ಕಾಗಮಿಸಿದ ಸ್ಥಳೀಯರು ಅಗ್ನಿ ಶಾಮಕ ದಳದವರಿಗೆ ಕರೆಮಾಡಿದ್ದಾರೆ. ಆದರೆ ಅವರಲ್ಲಿ ವಾಹನ ಲಭ್ಯವಿಲ್ಲದ ಕಾರಣ ಆಗಮಿಸಿರಲಿಲ್ಲ. ಬಳಿಕ ಸ್ಥಳೀಯರು ಪಕ್ಕದ ತೋಟದಿಂದ ನೀರು ಹಾರಿಸಿ, ನಂದಿಸಲು ಯತ್ನಿಸಿದರು.‌ ಕೆಲ ಸಮಯಗಳ ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಸೇರಿದಂತೆ ಸಾರ್ವಜನಿಕರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆಯಲ್ಲಿ ಗುಡ್ಡೆಯ ಅರ್ಧಭಾಗ ಸುಟ್ಟು ನಾಶವಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ

Leave a Reply

Your email address will not be published. Required fields are marked *

error: Content is protected !!