March 21, 2026

ರಸ್ತೆಯಲ್ಲೇ ಹೊತ್ತಿ ಉರಿದ ಸರಕು ತುಂಬಿದ್ದ ಲಾರಿ

0
image_editor_output_image-815020140-1677922192212.jpg

ಯಲ್ಲಾಪುರ: ಲಾರಿಯೊಂದಕ್ಕೆ ಬೆಂಕಿ ಹೊತ್ತಿ ಉರಿದ ಘಟನೆ ತಾಲೂಕಿನ ರಾ.ಹೆ.63 ರ ಅರಬೈಲ್ ಸಮೀಪ ಶನಿವಾರ ಬೆಳಿಗ್ಗೆ ನಡೆದಿದೆ.

ಹುಬ್ಬಳ್ಳಿ ಕಡೆಯಿಂದ ಮಂಗಳೂರು ಕಡೆ ಹೊರಟಿದ್ದ ಲಾರಿ ಅರೆಗಳಿಗೆಯಲ್ಲಿ ಸುಟ್ಟು ಕರಕಲಾಗಿದೆ.

ಮುಂಬೈಯಿಂದ ಸರಕು ತುಂಬಿಕೊಂಡು ಸಾಗುತ್ತಿದ್ದ ಈ ಲಾರಿಗೆ ಅರಬೈಲ್ ಬಳಿ ಬೆಂಕಿ ಕಾಣಿಸಿಕೊಂಡಿತು. ಕೂಡಲೇ ಚಾಲಕ ರಸ್ತೆ ಪಕ್ಕ ಲಾರಿ ನಿಲ್ಲಿಸಿದ್ದರಿಂದ ಚಾಲಕ ಹಾಗೂ ನಿರ್ವಾಹಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಲಾರಿಗೆ ಹೇಗೆ ಬೆಂಕಿ ಹೊತ್ತಿಕೊಂಡಿತು ಎಂಬುದರ ಬಗ್ಗೆ ಮಾಹಿತಿಯಿಲ್ಲ. ಹತ್ತು ಚಕ್ರದ ದೊಡ್ಡ ಲಾರಿ ಇದಾಗಿದ್ದು, ಲಕ್ಷಾಂತರ ರೂ. ಹಾನಿಯಾಗಿದೆ.

Leave a Reply

Your email address will not be published. Required fields are marked *

error: Content is protected !!