May 10, 2026

ಕಾಸರಗೋಡು: ರೈಲು ಬಡಿದು ಮಂಜೇಶ್ವರ ತಾಲೂಕು ಆಸ್ಪತ್ರೆಯ ಸಿಬ್ಬಂದಿ ಮೃತ್ಯು

0
image_editor_output_image73778920-1677746737595.jpg

ಕಾಸರಗೋಡು: ರೈಲು ಬಡಿದು ಮಂಜೇಶ್ವರ ತಾಲೂಕು ಆಸ್ಪತ್ರೆಯ ಸಿಬ್ಬಂದಿ ಮೃತಪಟ್ಟ ಘಟನೆ ಬುಧವಾರ ಸಂಜೆ ಉಪ್ಪಳ ರೈಲ್ವೆ ನಿಲ್ದಾಣ ಪರಿಸರದಲ್ಲಿ ನಡೆದಿದೆ.

ಉಪ್ಪಳ ಮಂಗಲ್ಪಾಡಿ ಯಲ್ಲಿರುವ ಮಂಜೇಶ್ವರ ತಾಲೂಕು ಆಸ್ಪತ್ರೆ ಲ್ಯಾಬ್ ಟೆಕ್ನಿಷಿಯನ್ ಪಿ. ಐಶ್ವರ್ಯ (27) ಮೃತಪಟ್ಟವರು. ಇವರು ನೀಲೇಶ್ವರ ದೇವನ್ ಆರ್ಟ್ಸ್ ನ ವಿಪಿನ್ ರವರ ಪತ್ನಿಯಾಗಿದ್ದಾರೆ.

ಬುಧವಾರ ಸಂಜೆ ಕೆಲಸ ಮುಗಿಸಿ ನೀಲೇಶ್ವರ ದಲ್ಲಿರುವ ಮನೆಗೆ ತೆರಳಲು ಉಪ್ಪಳ ರೈಲು ನಿಲ್ದಾಣ ಸಮೀಪ ಹಳಿ ದಾಟುತ್ತಿದ್ದಾಗ ರೈಲು ಬಡಿದು ಈ ದುರ್ಘಟನೆ ನಡೆದಿದೆ. ಮಂಜೇಶ್ವರ ಠಾಣಾ ಪೊಲೀಸರು ಮಹಜರು ನಡೆಸಿದರು.

Leave a Reply

Your email address will not be published. Required fields are marked *

error: Content is protected !!