September 20, 2024

ಎಷ್ಟೆ ಪೌಡರ್ ಹಾಕಿದ್ರು ಕೂಡ ನೀನು ವೈಟ್ ಆಗುವುದಿಲ್ಲ ಎಂದು ಹೇಳಿ ಪತ್ನಿಯನ್ನೇ ಕತ್ತು ಹಿಸುಕಿ ಹತ್ಯೆಗೈದ ಪತಿ

0

ಕಲಬುರಗಿ: ಎಷ್ಟೆ ಪೌಡರ್ ಹಾಕಿದ್ರು ಕೂಡ ನೀನು ವೈಟ್ ಆಗುವುದಿಲ್ಲ ಎಂದು ಪತ್ನಿಯನ್ನೇ ಪತಿಯೊಬ್ಬ ಕತ್ತು ಹಿಸುಕಿ ಹತ್ಯೆಗೈದ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕೆಲ್ಲೂರ್ ಗ್ರಾಮದಲ್ಲಿ ನಡೆದಿದೆ.

ಫರ್ಜಾನ ಬೇಗಂ(28) ಕೊಲೆಯಾದ ಮಹಿಳೆ. ಖಾಜಾ ಪಟೇಲ್ ಹಾಗೂ ಫರ್ಜಾನ ಬೇಗಂ 7 ವರ್ಷದ ಹಿಂದೆ ಮದುವೆಯಾಗಿದ್ದರು. ಆದರೆ ಮದುವೆಯಾದ ದಿನದಿಂದ ಖಾಜಾ ಪಟೇಲ್ ಹಾಗೂ ಆತನ ಕುಟುಂಬಸ್ಥರು ಫರ್ಜಾನ ಬೇಗಂಗೆ ನಿತ್ಯ ಕಿರುಕುಳ ನೀಡುತ್ತಿದ್ದರು.

ವರದಕ್ಷಿಣೆಯ ಜೊತೆಗೆ ಆಕೆಗೆ ಕಪ್ಪಗಿದ್ದೀಯಾ ಎಂದು ಪತಿ ಖಾಜಾ ಪಟೇಲ್ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದ.

ಈ ಹಿನ್ನೆಲೆಯಲ್ಲಿ ಫರ್ಜಾನ ಬೇಗಂ ಗಂಡ ಖಾಜಾ ಪಟೇಲ್ ಕತ್ತು ಹಿಸುಕಿ ಕೊಲೆ ಆರೋಪ ಕೇಳಿ ಬಂದಿದೆ.

ಕೊಲೆ ಮಾಡಿದ ಬಳಿಕ ಖಾಜಾ ಪಟೇಲ್ ಮತ್ತು ಕುಟುಂಬ ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!