March 31, 2026

ಬಂಟ್ವಾಳ: 19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

0
image_editor_output_image-1984700805-1677740304761.jpg

ಬಂಟ್ವಾಳ: ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಾರ್ಚ್ 1 ರಂದು ಇಲ್ಲಿನ ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.

ಉಜಿರೆ ಹಳೇಪೇಟೆ ನಿವಾಸಿ ಮಣಿ ಅಲಿಯಾಸ್ ಮಣಿಕಂಠ (41) ಬಂಧಿತ ಆರೋಪಿ.

ಪ್ರಸ್ತುತ ಈತ ಕುಂಬಳೆಯ ನೀರಜಾಲ್‌ನಲ್ಲಿ ನೆಲೆಸಿದ್ದು, ನೆಲ್ಯಾಡಿ ಸಮೀಪದ ಶಿಬಾಜೆ ಎಂಬಲ್ಲಿ ಮಣಿಯನ್ನು ಬಂಧಿಸಲಾಗಿದೆ.

ಖಚಿತ ಸುಳಿವಿನ ಮೇರೆಗೆ ನಗರ ಠಾಣೆಯ ವಾರಂಟ್ ಸಿಬ್ಬಂದಿ ಗಣೇಶ್, ರಾಜೇಶ್ ಮತ್ತು ಪ್ರವೀಣ್ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!