March 21, 2026

ಕಾರ್ಕಳ: ಜ್ಯುವೆಲ್ಲರ್ಸ್ ಅಂಗಡಿಯ ಬೀಗ ಮುರಿದು ಕಳ್ಳತನ

0
image_editor_output_image-1932821508-1677477268159.jpg

ಕಾರ್ಕಳ: ಜ್ಯುವೆಲ್ಲರ್ಸ್ ಅಂಗಡಿಯೊಂದರ ಬೀಗ ಮುರಿದು ಒಳನುಗ್ಗಿದ ಕಳ್ಳರು ಬೆಲೆಬಾಳುವ ಬೆಳ್ಳಿ ವಸ್ತುಗಳ ಕಳ್ಳತನ ನಡೆಸಿದ ಘಟನೆ ಕಾರ್ಕಳ ನಿಟ್ಟೆಯ ಫೆ. 26 ರ ತಡರಾತ್ರಿ ನಡೆದಿದೆ.

ಅಖಿಲೇಶ್ ಮಾಲೀಕತ್ವದ ಆರಾಧ್ಯ ಜ್ಯುವೆಲ್ಲರ್ಸ್ ಗೆ ತಡರಾತ್ರಿ 2 ಗಂಟೆಗೆ ಸುಮಾರಿಗೆ ನುಗ್ಗಿ ಕೃತ್ಯ ನಡೆಸಿದ್ದಾರೆ.

ಕಳ್ಳರು ಟಿಪ್ಪರ್ ಅಡ್ಡ ಇಟ್ಟು ಅನಂತರ, ಯಾವುದೇ ರೀತಿಯಲ್ಲಿ ಗುರುತು ಸಿಗದ ಹಾಗೆ, ಮುಖಕ್ಕೆ ಮುಸುಕು ಹಾಕಿಕೊಂಡು, ಅಂಗಡಿಯ ಬೀಗ ಒಡೆದು ಒಳಗೆ ನುಗ್ಗಿ ಕಳವು‌ ಕೃತ್ಯ ಎಸಗಿದ್ದಾರೆ.

ಕೃತ್ಯದ ಬಗ್ಗೆ ಅನುಮಾನಗೊಂಡ ಸ್ಥಳೀಯ ಅಂಗಡಿಯ ಸೆಕ್ಯೂರಿಟಿ ಗಾರ್ಡ್ ಘಟನಾ‌ ಸ್ಥಳದತ್ತ ಹೋದಾಗ ದುಷ್ಟರ್ಮಿಗಳು ಪಿಸ್ತೂಲ್ ತೋರಿಸಿ, ಬೆದರಿಸಿದ್ದಾರೆಂಬ ಮಾಹಿತಿ ಲಭಿಸಿದೆ.

ಘಟನಾ ಸ್ಥಳಕ್ಕೆ ಗ್ರಾಮಾಂತರ ಎಸ್ ಐ ತೇಜಸ್ವಿ ಹಾಗೂ ಸಿಬ್ಬಂದಿಗಳು ತೆರಳಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!