ಆಸ್ತಿಗಾಗಿ ತಂದೆಯನ್ನೇ ಸುಪಾರಿ ಕೊಟ್ಟು ಕೊಲೆ: ಪುತ್ರನ ಬಂಧನ

ಬೆಂಗಳೂರು: ಆಸ್ತಿಗಾಗಿ ಮಗನೊಬ್ಬ ತಂದೆಯನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಘಟನೆ ಬೆಂಗಳೂರಿನ ಪಣತ್ತೂರಿನ ಕಾವೇರಪ್ಪ ಲೇಔಟ್‍ನಲ್ಲಿ ನಡೆದಿದೆ.
ನಾರಾಯಣ್ ಸ್ವಾಮಿ ಕೊಲೆಯಾದ ವ್ಯಕ್ತಿ ಹಾಗೂ ಮಣಿಕಂಠ (37) ಬಂಧಿತ ಆರೋಪಿ.
ಮಣಿಕಂಠ ಈ ಮೊದಲು ಮೊದಲ ಪತಿಯನ್ನು ಕೊಂದು ಜೈಲು ಸೇರಿದ್ದ.
ಅದಾದ ಬಳಿಕ ಜೈಲಿನಿಂದ ಹೊರಬಂದು 2ನೇ ವಿವಾಹವಾಗಿದ್ದ. ಎರಡನೇ ಮದುವೆ ಬಳಿಕವೂ ಬೇರೊಬ್ಬ ಮಹಿಳೆ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ.
ವಿಚಾರ ಗೊತ್ತಾಗಿ ಪತಿಯಿಂದ ಎರಡನೇ ಪತ್ನಿ ದೂರವಿದ್ದಳು. ಡಿವೋರ್ಸ್ ವಿಚಾರವಾಗಿಯೂ ಮಾತುಕತೆ ನಡೆಯುತ್ತಿತ್ತು.