March 21, 2026

ಉಪ್ಪಿನಂಗಡಿ: ಮೊಬೈಲ್‌ ಅಂಗಡಿ ಮೇಲೆ ಪೊಲೀಸರಿಂದ ದಾಳಿ: ನಿಷೇಧಿತ ಇ- ಸಿಗರೇಟ್‌ ವಶ

0
smoking-vaping-e-cigarette-gettyimages-830035654.jpg

ಉಪ್ಪಿನಂಗಡಿ: ಇ- ಸಿಗರೇಟ್‌ ಮಾರಾಟ ಮಾಡುತ್ತಿದ್ದ ಮೊಬೈಲ್‌ ಅಂಗಡಿಯೊಂದಕ್ಕೆ ಉಪ್ಪಿನಂಗಡಿ ಪೊಲೀಸರು ಫೆ. 25ರ ಶನಿವಾರ ರಾತ್ರಿ ದಾಳಿ ನಡೆಸಿದ್ದಾರೆ.

ಖಚಿತ ಮಾಹಿತಿ ಪಡೆದ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಹಾಗೂ ಉಪ್ಪಿನಂಗಡಿ ಪೊಲೀಸ್‌ ಠಾಣಾ ಉಪನಿರೀಕ್ಷಕ ರಾಜೇಶ್‌ ಕೆ.ವಿ. ತಂಡದಿಂದ ಹಳೆ ಬಸ್‌ ನಿಲ್ದಾಣದ ಸಮೀಪದ ಪೃಥ್ವಿ ಕಾಂಪ್ಲೆಕ್ಸ್ ನಲ್ಲಿರುವ 4U ಬೆಸ್ಟ್ ಸರ್ವಿಸ್ ಎಂಬ ಮೊಬೈಲ್ ಅಂಗಡಿಯಲ್ಲಿ ನರಿಮೊಗರಿನ ಶೇಖ್‌ ಶಾಹಿದ್‌ ಎಂಬಾತನ ಅಂಗಡಿ ಮೇಲೆ ದಾಳಿ ನಡೆದಿದೆ.

ಇ- ಸಿಗರೇಟ್‌ ಮಾರಾಟ ಕಾನೂನು ಬಾಹಿರವಾಗಿದ್ದು, ವಿವಿಧ ಫ್ಲೇವರ್‌‌ನ 26,000 ರೂ ಮೌಲ್ಯದ ಒಟ್ಟು 52 ನಿಷೇಧಿತ ಇ-ಸಿಗರೇಟ್‌ ವಶಪಡಿಸಿಕೊಳ್ಳಲಾಗಿದೆ.

ಈ ಕುರಿತು ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!