ವಿಟ್ಲ: ವ್ಯಕ್ತಿ ನಿಗೂಡ ರೀತಿಯಲ್ಲಿ ಸಾವು

ವಿಟ್ಲ: ವ್ಯಕ್ತಿಯೋರ್ವರು ನಿಧನರಾದ ಘಟನೆ ಸೂರ್ಯ ಸಮೀಪದ ಅರ್ಕೆಜಾರ್ ಕುಮೇರು ಎಂಬಲ್ಲಿ ನಡೆದಿದೆ.
ಮೃತರನ್ನು ಸೂರ್ಯ ಸಮೀಪದ ಅರ್ಕೆಜಾರ್ ಕುಮೇರು ನಿವಾಸಿ ದಿ.ವಾಸು ನಾಯ್ಕ್ ರವರ ಪುತ್ರ ಅರವಿಂದ ಭಾಸ್ಕರ್ (37) ಎಂದು ಗುರುತಿಸಲಾಗಿದೆ.
ಭಾಸ್ಕರ್ ರವರು ನಿನ್ನೆ ರಾತ್ರಿ ವೇಳೆ ಮನೆಯಲ್ಲಿ ಊಟ ಮಾಡಿ ಮಲಗಿದ್ದು, ಬೆಳಗ್ಗೆ ಎಚ್ಚರಗೊಳ್ಳದ ಕಾರಣ ಆಸ್ಪತ್ರೆಗೆ ಕರೆದೊಯ್ದಿದ್ದು, ಈ ವೇಳೆ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ. ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಭಾಸ್ಕರ್ ಹಾಗೂ ಮತ್ತೋರ್ವ ವ್ಯಕ್ತಿ ನಡುವೆ ಹಣದ ವಿಚಾರವಾಗಿ ವೈಷಮ್ಯವಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇವರ ಸಾವಿನ ಬಗ್ಗೆ ಹಲವು ಮಂದಿ ಸಂಶಯ ವ್ಯಕ್ತಪಡಿಸುತ್ತಿದ್ದಾರೆ.