ಬಂಟ್ವಾಳ: ಒಣಹುಲ್ಲು ಸಾಗಾಟದ ಲಾರಿಯಲ್ಲಿ ಬೆಂಕಿ ಅವಘಡ

ಬಂಟ್ವಾಳ: ಒಣಹುಲ್ಲು ಸಾಗಾಟದ ಲಾರಿ ಹೊತ್ತಿ ಉರಿದ ಘಟನೆ ಕಲ್ಲಡ್ಕದ ದಾಸಕೋಡಿ ಎಂಬಲ್ಲಿ ನಡೆದಿದೆ.
ಹಾಸನದಿಂದ ಮಂಗಳೂರು ಕಡೆಗೆ ಆಗಮಿಸುತ್ತಿದ್ದ ಒಣಹುಲ್ಲು ಸಾಗಾಟದ ಲಾರಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ನಡೆದಿದೆ.
ಲಾರಿಯು ಹೆದ್ದಾರಿಯಲ್ಲಿ ಆಗಮಿಸುತ್ತಿದ್ದ ವೇಳೆ ಹೊತ್ತಿ ಉರಿದಿದ್ದು, ಬ್ಯಾಟರಿ ಶಾರ್ಟ್ ಸರ್ಕ್ನೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಬಂಟ್ವಾಳ ಅಗ್ನಿಶಾಮಕ ಠಾಣೆಯವರು ಘಟನ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವ ಕಾರ್ಯನಿರ್ವಹಿಸಿದ್ದಾರೆ.