March 21, 2026

ಹೆಬ್ರಿ: ಕುಡಿದು ಬಂದು ದಿನನಿತ್ಯ ಗಲಾಟೆ: ಮಗನನ್ನೇ ಹತ್ಯೆಗೈದ ತಂದೆ

0
IMG-20230226-WA0002.jpg

ಹೆಬ್ರಿ: ದಿನನಿತ್ಯ ಕುಡಿದು ಗಲಾಟೆ ಮಾಡುತ್ತಿದ್ದ ಮಗನ ಕಿರುಕುಳ ಸಹಿಸದ ತಂದೆ ಮಗನನ್ನು ಕೊಲೆ ಮಾಡಿದ ಘಟನೆ ವರಂಗ ಗ್ರಾಮದ ಮೂಡುಬೆಟ್ಟುವಿನಲ್ಲಿ ನಡೆದಿದೆ. ಸತೀಶ್‌ ಪೂಜಾರಿ(40) ಕೊಲೆಯಾದ ವ್ಯಕ್ತಿ.

ಆರೋಪಿ ತಂದೆಯನ್ನು ಕುಟ್ಟಿ ಪೂಜಾರಿ ಎಂದು ಗುರುತಿಸಲಾಗಿದೆ.

ದಿನನಿತ್ಯ ಮದ್ಯ ಸೇವಿಸಿ ಗಲಾಟೆ ಮಾಡಿಕೊಳ್ಳುತ್ತಿದ್ದು, ಫೆ. 24ರಂದು ತಂದೆ ಕುಟ್ಟಿ ಪೂಜಾರಿ ಮನೆಯ ಒಳಗೆ ಮಲಗಿದ್ದಾಗ ಸತೀಶ್‌ ಪೂಜಾರಿಯು ವಿಪರೀತ ಮದ್ಯ ಸೇವಿಸಿ ಬಂದು ಕುಟ್ಟಿ ಪೂಜಾರಿ ಮಲಗಿದ್ದ ಕೋಣೆಯ ಬಾಗಿಲಿಗೆ ಕಾಲಿನಿಂದ ಒದ್ದು ಕುಟ್ಟಿ ಪೂಜಾರಿಯವರನ್ನು ಮನೆಯ ಹೊರಗೆ ಅಂಗಳಕ್ಕೆ ಎಳೆದು ತಂದಾಗ ಕೋಪಗೊಂಡ ಕುಟ್ಟಿ ಪೂಜಾರಿಯು ಅಡುಗೆ ಕೋಣೆಯಲ್ಲಿದ್ದ ಒಲೆ ಬೆಂಕಿ ಊದುವ ಕಬ್ಬಿಣದ ಕೊಳವೆಯಿಂದ ಸತೀಶ ಪೂಜಾರಿ ಅವರ ಮೇಲೆ ಹಲ್ಲೆ ನಡೆಸಿದ ಪರಿಣಾಮ ಸತೀಶ ಪೂಜಾರಿ ಮೃತಪಟ್ಟಿದ್ದಾರೆ. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!