ಬಂಟ್ವಾಳ: ಚಾಲಕನ ನಿಯಂತ್ರಣ ಕಳೆದು ಹೆದ್ದಾರಿ ಬದಿಗೆ ಸರಿದು ನಿಂತ ಗ್ಯಾಸ್ ತುಂಬಿದ ಟ್ಯಾಂಕರ್:
ತಪ್ಪಿದ ಭಾರೀ ದುರಂತ
ಬಂಟ್ವಾಳ: ಚಾಲಕನ ನಿಯಂತ್ರಣ ಕಳೆದುಕೊಂಡ ಗ್ಯಾಸ್ ಟ್ಯಾಂಕರ್ ರಸ್ತೆ ಬದಿಗೆ ಸರಿದು ಅಪಾಯಕಾರಿ ಸ್ಥಿತಿಯಲ್ಲಿ ನಿಂತ ಘಟನೆ ಪಾಣೆಮಂಗಳೂರು ಎಂಬಲ್ಲಿ ನಡೆದಿದೆ.
ಪಾಣೆಮಂಗಳೂರು ಮಾರುತಿ ಸುಜುಕಿ ಶೋ ರೂಂ ಸಮೀಪ ಬೆಂಗಳೂರು ಮಂಗಳೂರುವರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ.
ಮಂಗಳೂರಿನಿಂದ ಗ್ಯಾಸ್ ತುಂಬಿಸಿಕೊಂಡು ಬೆಂಗಳೂರು ಕಡೆಗೆ ಹೋಗುವ ವೇಳೆ ಮುಂಜಾನೆ ಸುಮಾರು 4 ಗಂಟೆಯ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ.
ಪಾಣೆಮಂಗಳೂರು ಎಂಬಲ್ಲಿ ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಸೈಡ್ ಕೊಡುವ ಸಂದರ್ಭದಲ್ಲಿ ನಿಯಂತ್ರಣ ಕಳೆದ ಲಾರಿ ರಸ್ತೆಯ ಪಕ್ಕ ಸರಿದು ಅಪಾಯಕಾರಿ ಸ್ಥಿತಿಯಲ್ಲಿ ನಿಂತಿತ್ತು.
ಘಟನೆಯಿಂದ ಹೆದ್ದಾರಿಯಲ್ಲಿ ಕೆಲಹೊತ್ತು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ಬಳಿಕ ಕ್ರೇನ್ ಬಳಸಿ ಗ್ಯಾಸ್ ಟ್ಯಾಂಕರ್ ನ್ನು ಮೇಲಕ್ಕೆತ್ತಲಾಯಿತು.
ಬಂಟ್ವಾಳ ಟ್ರಾಫಿಕ್ ಎಸ್.ಐ.ರಾಜೇಶ್ ಕೆ.ವಿ.ಎ.ಎಸ್.ಐ. ವಿಜಯ್ ಹಾಗೂ ಟ್ರಾಫಿಕ್ ಪೋಲೀಸ್ ಸಿಬ್ಬಂದಿ ಗಳು ಟ್ರಾಫಿಕ್ ಗೆ ತೊಂದರೆಯಾಗದಂತೆ ಸ್ಥಳದಲ್ಲಿ ಕ್ರಮಕೈಗೊಂಡಿದ್ದರು.





