August 13, 2026

ಕೋಲ್ಡ್ ಸ್ಟೋರೇಜ್‌ನಲ್ಲಿ ಬಾಯ್ಲರ್ ಸ್ಪೋಟ: ನಾಲ್ವರು ಕಾರ್ಮಿಕರು ಮೃತ್ಯು

0
DB-12022023-blast.jpg

ದೌರಾಲಾ : ಬಿಎಸ್ಪಿಯ ಮಾಜಿ ಶಾಸಕ ಚಂದ್ರವೀರ್ ಸಿಂಗ್ ಅವರಿಗೆ ಸೇರಿದ ಕೋಲ್ಡ್ ಸ್ಟೋರೇಜ್‌ನಲ್ಲಿ ಬಾಯ್ಲರ್ ಸ್ಪೋಟಗೊಂಡು ನಾಲ್ವರು ಕಾರ್ಮಿಕರು ಸಾವನ್ನಪ್ಪಿದ ಘಟನೆ ಮೀರತ್ ಜಿಲ್ಲೆಯ ದೌರಾಲಾ ಪ್ರದೇಶದಲ್ಲಿ ನಡೆದಿದೆ.

ಮಧ್ಯಾಹ್ನ 3:30ಕ್ಕೆ ಶೈತ್ಯಾಗಾರದಲ್ಲಿ ಬಾಯ್ಲರ್ ಸ್ಪೋಟಗೊಂಡಿದೆ. ಕನಿಷ್ಠ ನಾಲ್ವರು ಕಾರ್ಮಿಕರು ಘಟನೆಯಲ್ಲಿ ಸಾವನ್ನಪ್ಪಿದರೆ ಸುಮಾರು 60 ಮಂದಿ ಮೂರ್ಛೆ ತಪ್ಪಿ ಬಿದ್ದಿದ್ದಾರೆ. ಸ್ಪೋಟದ ತೀವ್ರತೆಗೆ ಗ್ಯಾಸ್ ಸೋರಿಕೆಯಾಗಿದ್ದಲ್ಲದೆ, ಛಾವಣಿ ಸಂಪೂರ್ಣ ಹಾರಿ ಹೋಗಿದೆ. ಅವಶೇಷಗಳಡಿ ಕೆಲವು ಕಾರ್ಮಿಕರು ಸಿಲುಕಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

ಸದ್ಯ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ. ಗಾಯಾಳುಗಳನ್ನು ಮೀರತ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!