April 12, 2025

ಅಕ್ವೇರಿಯಂನಲ್ಲಿ ಸಾಕಿದ್ದ ಮೀನು ಸಾವು: ಬೇಸರಗೊಂಡು ಬಾಲಕ ಆತ್ಮಹತ್ಯೆ

0

ಕೊಚ್ಚಿ : ಮನೆಯಲ್ಲಿದ್ದ ಅಕ್ವೇರಿಯಂನಲ್ಲಿ ಮೀನು ಸಾವನ್ನಪ್ಪಿದ್ದಕ್ಕೆ ನೊಂದು ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಲಪ್ಪುರಂ ಜಿಲ್ಲೆಯ ಪೊನ್ನಾನಿಯ ಚಂಗರಂಕುಲಂ ಎಂಬಲ್ಲಿ ನಡೆದಿದೆ.

ಮೂಕುತಲ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿ ರೋಶನ್ ಮೆನನ್ (13 ) ಆತ್ಮಹತ್ಯೆಗೆ ಶರಣಾದ ಬಾಲಕ. ಈತ ಮನೆಯ ಅಕ್ವೇರಿಯಂನಲ್ಲಿ ಮೀನು ಸಾಕಾಣೆ ಮಾಡಿದ್ದು, ಆ ಮೀನುಗಳನ್ನು ಬಹಳವಾಗಿ ಹಚ್ಚಿಕೊಂಡಿದ್ದ. ಅಕ್ವೇರಿಯಂನ ಎಲ್ಲಾ ನಿರ್ವಹಣಾ ಕೆಲಸವನ್ನು ಆತನೇ ಮಾಡುತ್ತಿದ್ದ. ಕೆಲ ದಿನಗಳ ಹಿಂದೆ ಅಕ್ವೇರಿಯಂನಲ್ಲಿದ್ದ ಮೀನುಗಳು ಸಾವನ್ನಪ್ಪಿದ್ದು, ಇದರಿಂದ ಬಾಲಕ ಖಿನ್ನತೆಗೆ ಜಾರಿದ್ದ.

ಪ್ರಾಣಿ ಪಕ್ಷಿಗಳನ್ನೂ ಹಚ್ಚಿಕೊಂಡಿದ್ದ ಬಾಲಕ ಪಾರಿವಾಳಗಳಿಗೆ ಆಹಾರ ನೀಡಲೆಂದು ಹೊರ ಹೋದವನು ತುಂಬಾ ಹೊತ್ತಾದರೂ ಮನೆಗೆ ಬಾರದಿದ್ದುದನ್ನು ಗಮನಿಸಿದ ಪೋಷಕರು ಆತನಿಗಾಗಿ ಹುಡುಕಾಡಿದ್ದಾರೆ. ಈ ವೇಳೆ ಮನೆಯ ಟೆರೇಸ್‌ನಲ್ಲಿರುವ ಪ್ಲಾಸ್ಟಿಕ್ ಶೆಡ್‌ನೊಳಗೆ ಬಾಲಕ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕೂಡಲೇ ಆತನನ್ನು ಪೋಷಕರು ಆಸ್ಪತ್ರೆಗೆ ಕರೆದೊಯ್ದರಾದರೂ, ಆ ವೇಳೆಗಾಗಲೇ ಬಾಲಕ ಸಾವನ್ನಪ್ಪಿದ್ದ.

 

 

Leave a Reply

Your email address will not be published. Required fields are marked *

error: Content is protected !!