March 21, 2026

ಮಣಿಪಾಲ: ದ್ವಿಚಕ್ರ ವಾಹನದಲ್ಲಿ ಗಾಂಜಾ ಮಾರಾಟಕ್ಕೆ ಯತ್ನ: ಓರ್ವ ಪೊಲೀಸರ ವಶಕ್ಕೆ

0
IMG-20230101-WA00442.jpg

ಮಣಿಪಾಲ: ದ್ವಿಚಕ್ರ ವಾಹನದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಯನ್ನು ಕೊರಂಗ್ರಪಾಡಿ, ಮಾತಾ ಶ್ರೀ ವಾಸುಕಿ ನಗರ 5 ನೇ ಕ್ರಾಸ್ ನ ಇಕ್ಬಾಲ್ ಶೇಕ್ (32) ಎಂದು ಗುರುತಿಸಲಾಗಿದೆ.

ಮಣಿಪಾಲದ ಆರ್.ಟಿ.ಓ ಬಳಿ ಸ್ಕೂಟಿಯಲ್ಲಿ ಮಾದಕವಸ್ತು ಹಾಗೂ ಗಾಂಜಾ ಮಾರುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದಿದು ಫೆ.21ರಂದು ದಾಳಿ ನಡೆಸಿದ್ದಾರೆ. ಆರೋಪಿಯ ವಶದಲ್ಲಿದ್ದ 136 ಗ್ರಾಂ ಗಾಂಜಾ ‌, 0.36 ಗ್ರಾಂ ಎಂ ಡಿ ಎಂ ಎ (ಪ್ಲಾಸ್ಟಿಕ್ ಕವರ್‌ಸಮೇತ), 1 ಮೊಬೈಲ್ ಪೋನ್, ವೈಫೈ ರೂಟರ್, ನಗದು, ದ್ವಿಚಕ್ರ ವಾಹನ ಸಹಿತ ಒಟ್ಟಾರೆ 44,700ರೂ ,ಮೌಲ್ಯದ ಸೊತ್ತು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 32/2023 ಕಲಂ 8 (c) 20 (b) (ii) (A), 21(b), 22(b) ಎನ್.ಡಿ.ಪಿ.ಎಸ್ ಆಕ್ಟ್ ರಂತೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!