September 29, 2026

ಬೆಳ್ತಂಗಡಿ: ನಾಲ್ಕೂರು ಗ್ರಾಮದ ಪಾಡಿಯಲ್ಲಿ ಮಾನವನ ಅಸ್ಥಿಪಂಜರ ಪತ್ತೆ

0
image_editor_output_image-796401366-1790661200174

ಬೆಳ್ತಂಗಡಿ:  ಬೆಳ್ತಂಗಡಿ ತಾಲೂಕಿನ ನಾಲ್ಕೂರು ಗ್ರಾಮದ ಪಾಡಿ ಎಂಬಲ್ಲಿ ಸೋಮವಾರ ಸಂಜೆ ಅಪರಿಚಿತ ಮಾನವನ ಅಸ್ಥಿಪಂಜರವೊಂದು ಪತ್ತೆಯಾಗಿದೆ.

ನಾಲ್ಕೂರು ಗ್ರಾಮದ ಬಳಂಜ ಪಾಡಿ ನಿವಾಸಿ ವಿನೋದ್ ಎಂಬವರ ಕೃಷಿ ಭೂಮಿಯ ಕಣಿಯ ಬಳಿ ತಲೆಬುರುಡೆ, ಮೂಳೆಗಳು ಹಾಗೂ ಉಡುಪುಗಳು ಸೇರಿ ಮಾನವನ ಅಸ್ಥಿಪಂಜರ ಕಂಡುಬಂದಿದೆ.

 

ವಿನೋದ್ ಅವರ ಜಮೀನನ್ನು ಮಜ್ಜೆನಿಬೈಲು ಪಾಡಿ ನಿವಾಸಿ ಸುರೇಶ್ ಎಂಬವರು ನಿರ್ವಹಣೆ ಮಾಡುತ್ತಿದ್ದರು. ಯಂತ್ರದ ಮೂಲಕ ಕೃಷಿ ಭೂಮಿಯನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಈ ಅಸ್ಥಿಪಂಜರ ಪತ್ತೆಯಾಗಿದೆ.

ವಿಷಯ ತಿಳಿಯುತ್ತಿದ್ದಂತೆ ವೇಣೂರು ಪೊಲೀಸ್ ಅಧಿಕಾರಿಗಳು ಹಾಗೂ ಸೋಕೋ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

Leave a Reply

Your email address will not be published. Required fields are marked *

error: Content is protected !!