May 15, 2026

ಫಹಾದ್ ಅಹ್ಮದ್ ರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಟಿ ಸ್ವರಾ ಭಾಸ್ಕರ್

0
97983519.webp

ಉ. ಪ್ರದೇಶ: ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅಭಿಮಾನಿಗಳಿಗೆ ದೊಡ್ಡ ಸರ್ ಪ್ರೈಸ್ ಜೊತೆಗೆ ಶಾಕ್ ಕೊಟ್ಟಿದ್ದಾರೆ. ನಟಿ, ರಾಜಕೀಯ ಕಾರ್ಯಕರ್ತ ಫಹಾದ್ ಅಹ್ಮದ್ ಅವರೊಂದಿಗೆ ವಿವಾಹವಾಗಿರುವುದನ್ನ ಘೋಷಿಸಿದ್ದಾರೆ.

ತಾವು ಮದುವೆಯಾಗಿರುವ ವಿಷಯವನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದ ಅವರು, ನ್ಯಾಯಾಲಯದಲ್ಲಿ ವೈವಾಹಿಕ ಬಂಧನಕ್ಕೆ ಒಳಗಾಗಿರುವ ವಿವಾಹದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇಬ್ಬರ ನಡುವಿನ ಆರಂಭದ ಕ್ಷಣಗಳಿಂದ ಹಿಡಿದು ಸ್ನೇಹ, ಪ್ರೀತಿಯ ಕ್ಷಣಗಳ ಸಂಯೋಜನೆಯೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ. 2023 ರ ಜನವರಿ 6 ರಂದು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ಇಬ್ಬರೂ ವಿವಾಹವಾಗಿರುವುದಾಗಿ ಮಾಹಿತಿ ಹಂಚಿಕೊಂಡಿದ್ದು ಅಚ್ಚರಿ ಮೂಡಿಸಿದ್ದಾರೆ.

ಆಕೆ ಮಹಾರಾಷ್ಟ್ರ ಎಸ್ಪಿ ಯುವ ಘಟಕದ ಅಧ್ಯಕ್ಷ ಫಹಾದ್ ಅಹ್ಮದ್ ಅವರನ್ನು ಮದುವೆಯಾಗಿರುವ ವಿಚಾರವನ್ನು ದೃಢಪಡಿಸಿದ್ದಾರೆ. ವಿಶೇಷ ವಿವಾಹ ಕಾಯ್ದೆಯಡಿ ಜನವರಿ 2 ರಂದು ಕೋರ್ಟ್ ನಲ್ಲಿ ಈ ದಂಪತಿ ರಿಜಿಸ್ಟ್ರರ್ ಮದುವೆಯಾಗಿದ್ದಾರೆ. ಈ ಕುರಿತ ವಿಡಿಯೋವೊಂದನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ವರಾ ಭಾಸ್ಕರ್ ಇಂದು ಹಂಚಿಕೊಂಡಿದ್ದಾರೆ. “ಕೆಲವೊಮ್ಮೆ ನಿಮ್ಮ ಪಕ್ಕದಲ್ಲೇ ಇರುವ ಯಾವುದನ್ನಾದರೂ ನೀವು ಹೆಚ್ಚಾಗಿ ಹುಡುಕುತ್ತೀರಿ. ನಾವು ಪ್ರೀತಿಯನ್ನು ಹುಡುಕುತ್ತಿದ್ದೆವು, ಆದರೆ ನಾವು ಮೊದಲು ಸ್ನೇಹ ಕಂಡುಕೊಂಡಿದ್ದೇವು, ನಂತರ ನಾವು ಒಬ್ಬರನ್ನೊಬ್ಬರು ಕಂಡುಕೊಂಡೆವು ಎಂದು ಬರೆದುಕೊಂಡಿದ್ದಾರೆ.

ಈ ವಿಡಿಯೋವನ್ನು ರೀಟ್ವಿಟ್ ಮಾಡಿರುವ ಅಹಮದ್, ತನ್ನನ್ನು ಕೈ ಹಿಡಿದಿದ್ದಕ್ಕೆ ಧನ್ಯವಾದಗಳು ಅಂದು ಸ್ವರಾ ಭಾಸ್ಕರ್ ಅವರಿಗೆ ಹೇಳಿದ್ದಾರೆ. ಸ್ವರಾ ಭಾಸ್ಕರ್ ಕೊನೆಯ ಬಾರಿಗೆ ಕಳೆದ ವರ್ಷ ಬಿಡುಗಡೆಯಾದ ‘ಜಹಾನ್ ಚಾರ್ ಯಾರ್’ ಹಾಸ್ಯ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!