ಬೆಳ್ತಂಗಡಿ: ಕಾಲೇಜು ವಿದ್ಯಾರ್ಥಿನಿ ನಾಪತ್ತೆ: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ.ದೂರು ದಾಖಲು
ಬೆಳ್ತಂಗಡಿ: ಕಾಲೇಜಿನ ವಿದ್ಯಾರ್ಥಿನೀ ನಾಪತ್ತೆಯಾದ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.
ಉಜಿರೆ ಎಸ್.ಡಿ.ಎಂ ಕಾಲೇಜಿನ, ಪ್ರಥಮ ವರ್ಷದ ಬಿ.ಕಾಂ ವಿದ್ಯಾಬ್ಯಾಸವನ್ನು ಮಾಡುತ್ತಿರುವ ದೀಕ್ಷಿತಾ 18 ವರ್ಷ ರವರು ನಾಪತ್ತೆಯಾದ ವಿದ್ಯಾರ್ಥಿನಿ
ದೀಕ್ಷಿತಾ ಉಜಿರೆ ಹಾಸ್ಟೇಲ್ ನಲ್ಲಿ ಇದ್ದು, ಫೆ. 04 ರಂದು ಕಾಲೇಜಿನಲ್ಲಿ, ತಾನು ಮನೆಗೆ ಹೋಗಿ ಬರುವುದಾಗಿ ಹೋದವಳು ಮನೆಗೂ ಹೋಗದೇ ಸಂಬಂಧಿಕರ ಮನೆಗೂ ಹೋಗದೇ ವಾಪಾಸ್ಸು ಕಾಲೇಜಿಗೂ ಬಾರದೇ ನಾಪತ್ತೆಯಾಗಿದ್ದಾಳೆ ಎಂದು ಅವರ ತಂದೆ ಶಶಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.




