May 15, 2026

ಅಜ್ಮೀರ್‌ ಪ್ರವಾಸಕ್ಕೆ ಹೋಗಿದ್ದ ಸುಳ್ಯದ ವಿದ್ಯಾರ್ಥಿ ಮೃತ್ಯು

0
IMG-20230216-WA0005.jpg

ಸುಳ್ಯ: ಅಜ್ಮೀರ್‌ ಪ್ರವಾಸಕ್ಕೆಂದು ಹೋಗಿದ್ದ ಸುಳ್ಯದ
ವಿದ್ಯಾರ್ಥಿಯೋರ್ವರು ಮೃತಪಟ್ಟ ಘಟನೆ ಪುಣೆಯಲ್ಲಿ ನಡೆದಿದೆ.

ಸುಳ್ಯದ ಕರಿಂಬಿಲ ನಿವಾಸಿ ಇಬ್ರಾಹಿಂ ಸಖಾಫಿಯ ಪುತ್ರನಾಗಿರುವ ಸಿದ್ದೀಖ್ ಅಲ್ ಮದೀನಿ ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.

ಇವರು ಉಪ್ಪಿನಂಗಡಿಯ ಸಮೀಪದ ಮೂಡಡ್ಕ ವಿದ್ಯಾ ಸಂಸ್ಥೆಯಲ್ಲಿ ಅಲ್ ಮದೀನಿ ಬಿರುದು ಪಡೆದು ಉನ್ನತ ವಿದ್ಯಾಭ್ಯಾಸಕ್ಕಾಗಿ ಕೇರಳದ ಕುಟ್ಯಾಡಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ.

ಸ್ನೇಹಿತರ ಜೊತೆಗೆ ಅಜ್ಮೀರ್ ಪ್ರವಾಸಕ್ಕೆಂದು ಹೋಗಿದ್ದ ಅವರಿಗೆ ಪುಣೆಯಲ್ಲಿ ಉಸಿರಾಟದ ಸಮಸ್ಯೆ ಉಂಟಾಗಿದ್ದು, ಆಸ್ಪತ್ರೆಗೆ ದಾಖಲಿಸುವ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!