March 21, 2026

ಕಾಸರಗೋಡು: ರೈಲಿಗೆ ಹತ್ತುತ್ತಿದ್ದಾಗ ಕೆಳಗೆ ಬಿದ್ದು ವಿದ್ಯಾರ್ಥಿ ಗಂಭೀರ: ಮಂಗಳೂರಿನ ಆಸ್ಪತ್ರೆಗೆ ದಾಖಲು

0
trains.jpg

ಕಾಸರಗೋಡು: ಕುಂಬಳೆಯಲ್ಲಿ ವಿದ್ಯಾರ್ಥಿಯೋರ್ವ ರೈಲಿಗೆ ಹತ್ತುತ್ತಿದ್ದಾಗ ಕೆಳಗೆ ಬಿದ್ದು ಗಂಭೀರ ಗಾಯಗೂಂಡ ಘಟನೆ ನಡೆದಿದೆ.

ಮೊಗ್ರಾಲ್ ಚಲಿಯಂಗೋಡಿನ ಅಕ್ಬರ್ ಅಲಿ (18) ಗಾಯಗೊಂಡ ವಿದ್ಯಾರ್ಥಿ.

ಕಾಂಞಂಗಾಡ್‌ನ ಖಾಸಗಿ ಕಾಲೇಜಿನ ವಿದ್ಯಾರ್ಥಿಯಾಗಿರುವ ಅಕ್ಬರ್ ಅಲಿ ಬೆಳಿಗ್ಗೆ ಕುಂಬಳೆ ರೈಲು ನಿಲ್ದಾಣಕ್ಕೆ ತಲಪಿದಾಗ ರೈಲು ಮುಂದಕ್ಕೆ ಚಲಿಸು ತ್ತಿದ್ದು, ಈ ಸಂದರ್ಭದಲ್ಲಿ ರೈಲಿಗೆ ಹತ್ತಲೆ ತ್ನಿಸಿದಾಗ ಕೆಳಗೆ ಬಿದ್ದಿದ್ದು, ರೈಲು ಹಾಗೂ ಫ್ಲಾಟ್ ಫಾಂ ನಡುವೆ ಸಿಲುಕಿ ಗಂಭೀರ ಗಾಯ ಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!