February 3, 2026

ಕಾರ್ಕಳ: ಚಿನ್ನ ಪಡೆದು ಗ್ರಾಹಕರಿಗೆ ವಂಚನೆ: ಜುವೆಲ್ಲರ್ಸ್ ಮಾಲಕನಿಗೆ 26 ವರ್ಷ ಜೈಲು ಶಿಕ್ಷೆ ಪ್ರಕಟ

0
IMG-20230204-WA0018.jpg

ಕಾರ್ಕಳ: ನಗರದ ಮಾರ್ಕೆಟ್ ರಸ್ತೆಯಲ್ಲಿ ಶ್ರೀದುರ್ಗ ಜುವೆಲ್ಲರ್ಸ್ ವ್ಯವಹಾರ ನಡೆಸುತ್ತಾ ಗ್ರಾಹಕರಿಗೆ ವಂಚನೆಗೈದ ಆರೋಪಿ ರವೀಂದ್ರ ಆಚಾರ್ಯ ಯಾನೆ ರವೀಂದ್ರ ಎಂಬಾತನಿಗೆ ಕಾರ್ಕಳ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶೆ ಚೇತನಾ ಎಸ್.ಎಫ್. ಅವರು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದ್ದಾರೆ.

ಲೀಲಾವತಿ ಪೂಜಾರ್ತಿ ಇವರಿಂದ 2010 ನವಂಬರ್ 4ರಂದು 27.500 ಗ್ರಾಂ ತೂಕದ ರೂ. 50,000 ಮೌಲ್ಯದ ಹಳೆಯ ಚಿನ್ನದ ಕರಿಮಣಿ ಸರವನ್ನು ಪಡೆದುಕೊಂಡು ಇದರಿಂದ ಹೊಸ ತಾಗಿ ಚಿನ್ನದ ಎರಡಿ ಎಳೆ ನೇಯ್ಗಿ ಪೀಸ್ ಗುಂಡು ಕರಿಮಣಿ ಸರವನ್ನು ಮಾಡಿಕೊಡುವುದಾಗಿ ಆರೋಪಿ ನಂಬಿಸಿದ್ದನು.

ಮೇರಿ ಡಿ’ಸೋಜಾ ಇವರಿಂದ 2010 ನವಂಬರ್ 20ರಂದು 11 ಗ್ರಾಂ ತೂಕದ ರೂ. 22,000 ರೂಪಾಯಿ ಮೌಲ್ಯದ ಹಳೆ ಒಂದು ಜೊತೆ ಚಿನ್ನದ ಜೆಡೆ ಮುತ್ತು ಬೆಂಡೋಲೆ ಚಿನ್ನದ ಆಭರಣವನ್ನು ಪಡೆದುಕೊಂಡು ಇದರಿಂದ ಹೊಸತಾಗಿ ಒಂದು ಜೊತೆ ಚಿನ್ನದ ಜೆಡೆ ಮುತ್ತು ಬೆಂಡೋಲೆ ಮತ್ತು ಚಿನ್ನದ ಉಂಗುರವನ್ನು ಮಾಡಿಕೊಡುವುದಾಗಿ ಇವರಲ್ಲೂ ಆರೋಪಿ ನಂಬಿಸಿದನು.

ಮೀನಾಕ್ಷಿ ಇವರಿಂದ 2011 ಫೆಬ್ರವರಿ 5 ರಂದು 15,750 ಗ್ರಾಂ ತೂಕದ ರೂ. 32,500 ಮೌಲ್ಯದ ಹಳೆಯ ಡಿಸ್ಕೋ ಚೈನನ್ನು ಪಡೆದುಕೊಂಡು ಅದರಿಂದ ಹೊಸ ಹೊಸ ಹವಳದ ಲಕ್ಷ್ಮೀ ಪೆಂಡೆಂಟ್ ಇರುವ ಕನಕ ಮಾಲೆಯನ್ನು ಮಾಡಿಕೊಡುವುದಾಗಿ ನಂಬಿಸಿದ ಆರೋಪಿಯೂ ಹಳೆ ಚಿನ್ನದ ಒಡವೆಗಳನ್ನು ಪಡೆದಿದ್ದನು.

ಗ್ರಾಹಕರಿಗೆ ಚಿನ್ನದ ಒಡವೆಗಳನ್ನು ಹಿಂದಿರುಗಿಸದೇ ಅವುಗಳನ್ನು ಆಪಾದಿತನು ಕರಗಿಸಿ ಬೇರೆಯವರಿಗೆ ಮಾರಾಟ ಮಾಡಿ ಪಡೆದ ಹಣವನ್ನು ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡು ಒಟ್ಟು ರೂ. 1,08,500 ವಂಚಿಸಿ ನಂಬಿಕೆ ದ್ರೋಹವೆಸಗಿರುತ್ತಾನೆ.

ಈ ಬಗ್ಗೆ ಆರೋಪಿಯ ವಿರುದ್ದ ಭಾ.ದಂ.ಸ. ಕಲಂ.409,420ರ ರೀತ್ಯಾ ಶಿಕ್ಷಿಸಲ್ಪಡುವ ಅಪರಾಧಗಳಿಗೆ ಸಂಬಂಧಿಸಿ ಕಾರ್ಕಳ ನಗರ ಠಾಣೆಯ ಪೋಲೀಸ್ ಮುಖ್ಯ ಪೇದೆಯಾಗಿದ್ದ ಯಶವಂತ ಎಂ..ವಿ. ಪ್ರಥಮ ವರ್ತಮಾನ ತಯಾರಿಸಿ, ಪೊಲೀಸ್ ಉಪನಿರಕ್ಷಕರಾದಪ್ರಮೋದ್ ಕುಮಾರ್ ಪಿ. ಕಬ್ಬಾಳ್ ರಾಜ್ ಹೆಚ್.ಡಿ ಇವರು ಪ್ರಕರಣದ ತನಿಖೆ ನಡೆಸಿದ್ದರು.ಪೊಲೀಸ್ ಉಪನಿರೀಕ್ಷಕ ಇಮ್ರಾನ್ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಯನ್ನು ಆರೋಪಿಯ ವಿರುದ್ಧ ದಾಖಲಿಸಿದ್ದರು.

ಪ್ರಕರಣದ ವಿಚಾರಣೆಯನ್ನು ಕೈಗೊಂಡ ಕಾರ್ಕಳ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶೆ ಚೇತನಾ ಎಸ್.ಎಫ್. ಇವರು ಆರೋಪಿಯ ವಿರುದ್ಧದ ಪ್ರಕರಣವು ಸಾಭೀತು ಆಗಿದೆ ಎಂದು ಅಭಿಪ್ರಾಯಪಟ್ಟರು. ಆರೋಪಿ ರವೀಂದ್ರ ಆಚಾರ್ಯ ಯಾನೆ ರವೀಂದ್ರ ಇವನನ್ನು ಅಪರಾಧಿ ಎಂದು ಘೋಷಿಸಿ ಕಲಂ.409 ಭಾರತೀಯ ದಂಡ ಸಂಹಿತೆ ಅಡಿಯ ಅಪರಾಧಕ್ಕೆ 3 ವರ್ಷಗಳ ಸಾದಾ ಸಜೆ ಮತ್ತು ರೂ.5,0000 ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ತಿಂಗಳ ಸಾದಾ ಸಜೆ. ಕಲಂ.420 ಭಾರತೀಯ ದಂಡ ಸಂಹಿತೆ ಅಡಿಯ ಅಪರಾಧಕ್ಕೆ 23 ವರ್ಷಗಳ ಸಾದಾ ಸಜೆ ಮತ್ತು ರೂ.5,000ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ತಿಂಗಳ ಸಾದಾ ಶಿಕ್ಷೆಯನ್ನು ಅನುಭವಿಸುವಂತೆ ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ.

ಪ್ರಕರಣದಲ್ಲಿ ಸರಕಾರದ ಪರ ಸಹಾಯಕ ಸರಕಾರಿ ಅಭಿಯೋಜಕಿ ಶೋಭಾ ಮಹಾದೇವ ನಾಯ್ಕ ಪ್ರಕರಣದ ಸಾಕ್ಷಿದಾರರ ವಿಚಾರಣೆ ನಡೆಸಿ, ವಾದ ಮಂಡಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!