February 4, 2026

ಲಿಫ್ಟ್‌ನಲ್ಲಿ ಸಿಲುಕಿ ಬಾಲಕ ಮೃತ್ಯು

0
IMG-20230213-WA0021.jpg

ನವದೆಹಲಿ: ಉತ್ತರ ದಿಲ್ಲಿ ಜಿಲ್ಲೆಯ ಹೊರ ವಲಯದ ಬವಾನಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೂಲರ್ ಫ್ಯಾಕ್ಟರಿಯೊಂದರ ಲಿಫ್ಟ್‌ ಅಡಿ ಸಿಲುಕಿ 15 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತ ಬಾಲಕನನ್ನು ಲೋಕೇಶ್ ಎಂದು ಗುರುತಿಸಲಾಗಿದ್ದು, ಆತನ ತಾಯಿಯು ಆ ಫ್ಯಾಕ್ಟರಿಯಲ್ಲಿ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ.

ಇನ್ನು ಬಾಲಕ ಆಟವಾಡುತ್ತಾ, ಲಿಫ್ಟ್ ಅಡಿಗೆ ಹೋಗಿದ್ದು, ಯಾರೋ ಲಿಫ್ಟ್‌ಗಾಗಿ ಗುಂಡಿ ಒತ್ತಿದಾಗ ಕೆಳಗೆ ಬಂದಿರುವ ಎಲಿವೇಟರ್ ಅಡಿಗೆ ಸಿಕ್ಕಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಈ ಕುರಿತು ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!