May 11, 2026

ಮಲ್ಪೆ: ಬೋಟಿನಲ್ಲಿ ಆಯತಪ್ಪಿ ಬಿದ್ದು ಮೀನುಗಾರ ಮೃತ್ಯು

0
IMG-20230213-WA0020.jpg

ಮಲ್ಪೆ: ಮೀನುಗಾರಿಕೆಯಲ್ಲಿ ನಿರತರಾಗಿದ್ದ ವೇಳೆ ಆಕಸ್ಮಿಕವಾಗಿ ಆಯತಪ್ಪಿ ಬೋಟಿನ ಬಲೆ ಎಳೆಯುವ ಡ್ರಮ್ ವಿಂಚ್ ಮೇಲೆ ಬಿದ್ದ ಪರಿಣಾಮ ಮೀನುಗಾರ ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಭಟ್ಕಳದ ಬೈಲೂರಿನ ಬಾವಿಹಿತ್ಲು ನಿವಾಸಿ ನಾಗರಾಜನ್(27) ಎಂದು ಗುರುತಿಸಲಾಗಿದೆ.

ನಾಗರಾಜನ್ ಮಲ್ಪೆ ಬಂದರಿನಲ್ಲಿ ಪ್ರತಾಪ್ ಸುವರ್ಣ ಮಾಲೀಕತ್ವದ ಶ್ರೀಕೃಷ್ಣ ಚಕ್ರ ಲೈಲ್ಯಾಂಡ್ ಮೀನುಗಾರಿಕಾ ಬೋಟ್ ನಲ್ಲಿ ಕಲಾಸಿಯಾಗಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದರು.

ಫೆ.11 ರಂದು ಅರಬ್ಬೀ ಸಮುದ್ರದ 200 ನಾಟಿಕಲ್ ದೂರದಲ್ಲಿ ಮೀನುಗಾರಿಕೆಯಲ್ಲಿ ನಿರತರಾಗಿದ್ದಾಗ, ಮುಂಜಾನೆ 05:45 ರ ವೇಳೆಗೆ ಸಮುದ್ರದ ಅಲೆಗಳ ಅಬ್ಬರಕ್ಕೆ ಬೋಟ್ ಅಲುಗಾಡಿ ಮೀನುಗಾರಿಕೆ ಕೆಲಸ ಮಾಡುತಿದ್ದ ನಾಗರಾಜನ್ ಆಕಸ್ಮಿಕವಾಗಿ ಆಯತಪ್ಪಿ ಬೋಟಿನ ಬಲೆ ಎಳೆಯುವ ಡ್ರಮ್ ವಿಂಚ್ ಗೆ ಬಿದ್ದು ಡ್ರಮ್ ವಿಂಚ್ ಆತನ ತಲೆಯ ಹಿಂಬದಿಗೆ ತಾಗಿ ತೀವ್ರ ರಕ್ತಗಾಯವಾಗಿ ಸ್ಥಳದಲ್ಲೆ ಮೃತ ಪಟ್ಟಿದ್ದಾರೆ ಎಂದು ದೂರು ದಾಖಲಾಗಿದೆ.

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!