February 3, 2026

ಸಮಯಕ್ಕೆ ಬಾರದ ಆ್ಯಂಬುಲೆನ್ಸ್: ತಳ್ಳುವ ಗಾಡಿಯಲ್ಲಿ ತಂದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದ ಬಾಲಕ: ವೀಡಿಯೋ ವೈರಲ್

0
image_editor_output_image1345629645-1676197000112.jpg

ಮಧ್ಯಪ್ರದೇಶ: ಸೂಕ್ತ ಸಮಯಕ್ಕೆ ಆಂಬ್ಯುಲೆನ್ಸ್ ಸೌಲಭ್ಯ ದೊರೆಯದೇ ಆರು ವರ್ಷದ ಬಾಲಕನೋರ್ವ ಮರದ ತಳ್ಳುವ ಗಾಡಿಯ ಮೇಲೆ ಅನಾರೋಗ್ಯದಿಂದ ಬಳಲುತ್ತಿರುವ ತಂದೆಯನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ಮನಕಲಕುವ ಘಟನೆ ನಡೆದಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೈರಲ್ ವಿಡಿಯೋದಲ್ಲಿ, ಟಿ-ಶರ್ಟ್ ಮತ್ತು ನೀಲಿ ಜೀನ್ಸ್ ಧರಿಸಿರುವ ಬಾಲಕನೋರ್ವ ತಂದೆಯನ್ನು ಮಲಗಿಸಿಕೊಂಡು ಕರೆತರುತ್ತಿದ್ದಾನೆ. ಆತನ ತಾಯಿ ಗಾಡಿಯೆದುರು ಬದಿಯಿಂದ ತಳ್ಳುತ್ತಿದ್ದಾರೆ. ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯ ಬಲಿಯಾರಿ ಪಟ್ಟಣದಲ್ಲಿ ನಡೆದ ಘಟನೆ ಇದಾಗಿದೆ.

Leave a Reply

Your email address will not be published. Required fields are marked *

error: Content is protected !!