online ಮೂಲಕ ಆರ್ಡರ್ ಮಾಡಿದ ಬ್ರೆಡ್ ಪ್ಯಾಕೆಟ್ ನಲ್ಲಿ ಸತ್ತ ಇಲಿ ಪತ್ತೆ
ಕೊಚ್ಚಿ: ಬ್ಲಿಂಕ್ಇಟ್ ನಿಂದ ಆರ್ಡರ್ ಮಾಡಿದ ಬ್ರೆಡ್ ಪ್ಯಾಕೆಟ್ನಲ್ಲಿ ಸತ್ತ ಇಲಿ ಪತ್ತೆಯಾಗಿದೆ.
ಕೇರಳದ ಕೊಚ್ಚಿಯಲ್ಲಿ ನಡೆದ ಇಂತಹ ಒಂದು ಅಹಿತಕರ ಘಟೆನಯನ್ನು ನಿತಿನ್ ಅರೋರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫೋಟೋ ಮೂಲಕ ಹಚ್ಚಿಕೊಂಡಿದ್ದಾರೆ.
ನಿತಿನ್ ಟ್ವಿಟ್ಟರ್ ನಲ್ಲಿ ತಾವು ಬ್ಲಿಂಕ್ಇಟ್ ನಿಂದ ಆರ್ಡರ್ ಮಾಡಿದ ಬ್ರೆಡ್ ಪ್ಯಾಕೆಟ್ನಲ್ಲಿ ಕಂಡ ಸತ್ತ ಇಲಿಯ ಫೋಟೋವನ್ನು ಹಂಚಿಕೊಂಡು ಬೇಸರವನ್ನು ವ್ಯಕ್ತಪಡಿಸಿದ್ದಾರ.
10 ನಿಮಿಷಗಳ ಡೆಲಿವರಿಯಲ್ಲಿ ಇಂತಹ ಸಾಮಾನುಗಳು ಇದ್ದರೆ ನಾನು ನನಗೆ ಬೇಕಾದ ವಸ್ತುಗಳನ್ನು ಕೆಲವು ಗಂಟೆಗಳ ಕಾಲ ಕಾದು ತೆಗೆದುಕೊಳ್ಳುವುದೇ ಒಳ್ಳೆಯದು” ಎಂದು ಟ್ವಿಟ್ಟರ್ನಲ್ಲಿ ಅರೋರಾ ಇಲಿಯ ಚಿತ್ರದ ಜೊತೆಗೆ ಬರೆದುಕೊಂಡಿದ್ದಾರೆ.




